alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಟೋಬರ್ ನಿಂದ ಲಂಡನ್ ರಸ್ತೆಗಿಳಿಯೊಲ್ಲ ಉಬರ್…!

ಲಂಡನ್ ನಲ್ಲಿ ಸೆಪ್ಟೆಂಬರ್ ನಂತರ ಉಬರ್ ಕ್ಯಾಬ್ ಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಸೆಪ್ಟೆಂಬರ್ 30ಕ್ಕೆ ಉಬರ್ ಲೈಸನ್ಸ್ ಅಂತ್ಯವಾಗಲಿದ್ದು, ಪರವಾನಿಗೆಯನ್ನು ನವೀಕರಿಸದಿರಲು ಲಂಡನ್ ನ ಸಾರಿಗೆ ನಿಯಂತ್ರಕ ನಿರ್ಧರಿಸಿದೆ. ಇದರಿಂದಾಗಿ ಉಬರ್ ನ 40,000 ಚಾಲಕರಿಗೆ ಹೊಡೆತ ಬೀಳಲಿದೆ.

ಕಾರ್ಯಾಚರಣೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲು ಉಬರ್ ಗೆ 21 ದಿನಗಳ ಕಾಲಾವಕಾಶವಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಸಾಂಸ್ಥಿಕ ಜವಾಬ್ಧಾರಿಯ ಕೊರತೆ ಉಬರ್ ಗಿದೆ. ಹಾಗಾಗಿ ಲೈಸನ್ಸ್ ರದ್ದು ಮಾಡೋದಾಗಿ ಲಂಡನ್ ಸಾರಿಗೆ ನಿಯಂತ್ರಕ ತಿಳಿಸಿದೆ.

ಲಂಡನ್ ನಲ್ಲಿ ಕ್ಯಾಬ್ ಸೇವೆ ನೀಡ್ತಾ ಇರೋ ಮೂರನೇ ಅತಿ ದೊಡ್ಡ ಸಂಸ್ಥೆ ಉಬರ್. ಸುರಕ್ಷತೆಯ ಕೊರತೆ ಆರೋಪದ ಹಿನ್ನೆಲೆಯಲ್ಲಿ ಲಂಡನ್ ನ ಬ್ಲಾಕ್ ಕ್ಯಾಬ್ ಚಾಲಕರು ಕೂಡ ಉಬರ್ ಮೇಲೆ ದಾಳಿ ಮಾಡಿದ್ದರು. ಹಲವು ಲೈಂಗಿಕ ಕಿರುಕುಳ ಪ್ರಕರಣಗಳು ಕೂಡ ಬೆಳಕಿಗೆ ಬಂದಿದ್ದವು. ಈಗಾಗ್ಲೇ ಡೆನ್ಮಾರ್ಕ್ ಮತ್ತು ಹಂಗ್ರಿಯಲ್ಲಿ ಉಬರ್ ಆ್ಯಪ್ ಅನ್ನೇ ತೆಗೆದುಹಾಕಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...