alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಪ್ರಾಣ ತೆಗೆದ ಸೆಲ್ಫ್ ಡ್ರೈವಿಂಗ್ ಕಾರ್

ವಿಶ್ವದ ಅನೇಕ ಕಡೆ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ನ ಸೆಲ್ಫ್ ಡ್ರೈವ್ ಕಾರು ಮಹಿಳೆಯೊಬ್ಬಳ ಪ್ರಾಣ ತೆಗೆದಿದೆ. ಈ ಘಟನೆ ನಂತ್ರ ಉಬರ್ ನ ಸೆಲ್ಫ್ ಡ್ರೈವ್ ಕಾರಿನ ಬಗ್ಗೆ ಅನೇಕ ಸವಾಲುಗಳೆದ್ದಿವೆ. ಘಟನೆ ಅರಿಝೋನಾದಲ್ಲಿ ನಡೆದಿದೆ. ಘಟನೆ ವೇಳೆ ಸೆಲ್ಫ್ ಡ್ರೈವಿಂಗ್ ಕಾರಿನ ಪರೀಕ್ಷೆ ನಡೆಯುತ್ತಿತ್ತು ಎನ್ನಲಾಗಿದೆ.

ಅರಿಝೋನಾದಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಘಟನೆ ನಂತ್ರ ಅಮೆರಿಕಾ ಹಾಗೂ ಕೆನಡಾದಲ್ಲಿ ಸೆಲ್ಫ್ ಡ್ರೈವಿಂಗ್ ಕಾರನ್ನು ರಸ್ತೆಗಿಳಿಸುವ ನಿರ್ಧಾರದಿಂದ ಉಬರ್ ಹಿಂದೆ ಸರಿದಿದೆ.

ಸೆಲ್ಫ್ ಡ್ರೈವಿಂಗ್ ಕಾರ್ ನ ಮೊದಲ ಅಪಘಾತ ಇದಾಗಿದೆ. ಘಟನೆ ವೇಳೆ ಕಾರು ಗಂಟೆಗೆ 65 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದೆ. ಪಾದಚಾರಿ ಮಹಿಳೆ ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾಳೆ. ಘಟನೆ ವೇಳೆ ಕಾರ್ ನಲ್ಲಿ ಆಪರೇಟರ್ ಗಳಿದ್ದರು ಎನ್ನಲಾಗಿದೆ. ಆಪರೇಟರ್ ಗಳು ಹಿಂದಿನ ಸೀಟ್ ನಲ್ಲಿ ಕುಳಿತಿದ್ದರು. ಕಾರು ಸ್ವಯಂಚಾಲಿತ ಮೋಡ್ ನಲ್ಲಿತ್ತು.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...