alex Certify
ಕನ್ನಡ ದುನಿಯಾ       Mobile App
       

Kannada Duniya

ಉಬರ್ ಕ್ಯಾಬ್ ಏರಿದ್ದ ಪ್ರಯಾಣಿಕ ಬಿಲ್ ನೋಡಿ ಸುಸ್ತೋ ಸುಸ್ತು

ಅವಸರದಲ್ಲಿ ಎಲ್ಲಿಗಾದ್ರೂ ಹೋಗಬೇಕು ಅಂದಾಗ ಬೆಲೆ ಸ್ವಲ್ಪ ಜಾಸ್ತಿ ಎನಿಸಿದ್ರೂ ಎಲ್ರೂ ಕ್ಯಾಬ್ ಬುಕ್ ಮಾಡ್ತಾರೆ. ಆದ್ರೆ ಕೆನಡಾದಲ್ಲಿ ಈ ಪ್ರಯಾಣ ವ್ಯಕ್ತಿಯೊಬ್ಬನಿಗೆ ಬಲು ದುಬಾರಿಯಾಗಿದೆ. ಟೊರಾಂಟೋದ ವಿಡ್ಮರ್ ಸ್ಟ್ರೀಟ್ ನಿಂದ ಆತ ಉಬರ್ ಕ್ಯಾಬ್ ಬುಕ್ ಮಾಡಿದ್ದ.

ಒಟ್ಟು 7.7 ಕಿಮೀ ಪ್ರಯಾಣ ಮಾಡಿದ್ದಾನೆ. 20 ನಿಮಿಷಗಳಲ್ಲಿ ತಾನು ಹೋಗಬೇಕಾಗಿದ್ದ ಸ್ಥಳಕ್ಕೆ ಆತ ತಲುಪಿದ್ದ. ಈ ಪ್ರಯಾಣಕ್ಕೆ ಸರಿಸುಮಾರು 12-16 ಡಾಲರ್ ವೆಚ್ಚವಾಗಬೇಕಿತ್ತು. ಆದ್ರೆ ಉಬರ್ ಚಾಲಕ ಕೊಟ್ಟ ಬಿಲ್ ನೋಡಿ ಪ್ರಯಾಣಿಕ ಕಂಗಾಲಾಗಿದ್ದಾನೆ.

ಉಬರ್ ಆತನಿಗೆ 18,518 ಕೆನಡಿಯನ್ ಡಾಲರ್ ಶುಲ್ಕ ವಿಧಿಸಿತ್ತು. ಅಂದ್ರೆ ಸುಮಾರು 14,400 ಅಮೆರಿಕನ್ ಡಾಲರ್. ಪ್ರಯಾಣಿಕರನ್ನು ಸುಲಿಗೆ ಮಾಡ್ತಿರೋ ಉಬರ್ ಕ್ಯಾಬ್ ಬಗ್ಗೆ ಆತ ಸಾಮಾಜಿಕ ತಾಣದಲ್ಲೂ ಪೋಸ್ಟ್ ಮಾಡಿದ್ದಾನೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ ಅಂತಾ ಹೇಳಿರುವ ಉಬರ್, ಹಣ ವಾಪಸ್ ನೀಡುವುದಾಗಿ ಭರವಸೆ ಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...