alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳ ಗ್ರಹದಲ್ಲಿ ತಲೆಯೆತ್ತಲಿದೆ ಸುಂದರ ನಗರ

city-on-mars-main

ವೈಜ್ಞಾನಿಕ ಲೋಕಕ್ಕೆ ಸೆಡ್ಡು ಹೊಡೆದಿರುವ ಮಾನವ, ಮಂಗಳನ ಅಂಗಳದಲ್ಲಿ ಕಾಲಿಟ್ಟಿದ್ದಾನೆ. ಇದೀಗ ಮಂಗಳ ಗ್ರಹದಲ್ಲೊಂದು ಸುಂದರ ನಗರ ನಿರ್ಮಾಣದ ಕಲ್ಪನೆ ಕೂಡ ಮೂಡಿದೆ. 2117ರ ವೇಳೆಗೆ ಮಂಗಳನ ಅಂಗಳದಲ್ಲಿ ನಗರವೊಂದನ್ನು ನಿರ್ಮಾಣ ಮಾಡುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ.

ಯುಎಇ ಉಪರಾಷ್ಟ್ರಪತಿ, ಪ್ರಧಾನಿ, ದುಬೈ ದೊರೆ ಶೇಕ್ ಮೊಹಮದ್ ಬಿನ್ ರಶೀದ್ ಅಲ್ ಮುಕ್ತೋಮ್, ಅಬುಧಾಬಿಯ ರಾಜಕುಮಾರ ಸೇರಿದಂತೆ ಹಲವರು ಜೊತೆಯಾಗಿ ಈ ಯೋಜನೆ ಸಾಕಾರಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. 100 ವರ್ಷಗಳ ಈ ರಾಷ್ಟ್ರೀಯ ಯೋಜನೆಯ ಘೋಷಣೆ ಮಾಡಿದ್ದಾರೆ. ಉಳಿದ ಗಲ್ಫ್ ರಾಷ್ಟ್ರಗಳು ಕೂಡ ಯುಎಇಗೆ ಸಾಥ್ ಕೊಡಲಿವೆ.

ಮುಂದಿನ ದಶಕಗಳಲ್ಲಿ ಕೆಂಪು ಗ್ರಹಕ್ಕೆ ಮಾನವರನ್ನು ಕಳಿಸಲು ಈ ಮೂಲಕ ಯುಎಇ ಯೋಜನೆ ರೂಪಿಸಿದೆ. ಯುಎಇ ಬಾಹ್ಯಾಕಾಶ ವಿಜ್ಞಾನ ಯೂನಿವರ್ಸಿಟಿಗಳು ಹಾಗೂ ಇತರ ವೈಜ್ಞಾನಿಕ ಸಂಸ್ಥೆಗಳು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಲಿವೆ. ವಿಶ್ವ ಸರ್ಕಾರ ಸಮ್ಮೇಳನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಮಂಗಳ ಗ್ರಹಕ್ಕೆ ಸಾರಿಗೆ, ವಿದ್ಯುತ್ ಮತ್ತು ಆಹಾರ ಪೂರೈಕೆಗೆ ಈ ಯೋಜನೆ ಒತ್ತು ನೀಡಲಿದೆ. ಮಂಗಳ ಗ್ರಹವನ್ನು ಮಾನವ ವಾಸ ಯೋಗ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಯುಎಇ ಪ್ರಯತ್ನ ಆರಂಭಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...