alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ ತಂಡ ಬೆಂಬಲಿಸಿದ್ದಕ್ಕೆ ಕೂಡಿ ಹಾಕಿದ ಶೇಕ್

ಹೊಟ್ಟೆಪಾಡಿಗೆ ಕೆಲಸ ಅರಸಿ ದುಬೈಗೆ ತೆರಳಿದ್ದರೂ, ಭಾರತದ ಮೇಲಿನ ಅಭಿಮಾನದಿಂದ ಭಾರತದ ಫುಟ್‌ಬಾಲ್ ತಂಡಕ್ಕೆ ಬೆಂಬಲಿಸಿದ್ದಕ್ಕೆ ಕೂಡಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ‌.

ಭಾರತ-ಯುಎಇ ನಡುವಿನ ಫುಟ್‌ ಬಾಲ್ ಪಂದ್ಯಾವಳಿಯಲ್ಲಿ ಯಾವ ತಂಡವನ್ನು ಬೆಂಬಲಿಸುತ್ತೀರಿ ಎಂದು ಶೇಕ್‌ ತನ್ನ ಬಳಿ ಕೆಲಸ ಮಾಡುತ್ತಿರುವವರನ್ನು ಕೇಳಿದಾಗ, ಭಾರತಕ್ಕೆ ಎಂದು ಉತ್ತರಿಸಿದ್ದಾರೆ. ಅರಬ್ ನೆಲದಲ್ಲಿ ದುಡಿಯುವಾಗ ಅರಬ್ ತಂಡಕ್ಕೆ‌ ಬೆಂಬಲಿಸಬೇಕು ಎಂದು ಹೇಳಿ, ಕೂಡಿಹಾಕಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಾಕುತ್ತಿದ್ದಂತೆ, ಶೇಕ್ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿದ್ದು, ಇದೀಗ ಕೆಲಸಗಾರರನ್ನು ಕೂಡಿಹಾಕಿರುವ ಆರೋಪದಲ್ಲಿ ಶೇಕ್‌ ನನ್ನು ಬಂಧಿಸಲು ಸರಕಾರ ಮುಂದಾಗಿದೆ. 6 ತಿಂಗಳಿನಿಂದ 10 ವರ್ಷ ಜೈಲು ಹಾಗೂ ಕೋಟಿಗಟ್ಟಲೆ ದಂಡ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದರೆ ವಿವಾದ ತೀವ್ರಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಇದೊಂದು ತಮಾಷೆಗಾಗಿ ಮಾಡಿದ ನಾಟಕ ಎಂದು ಶೇಕ್ ಸಮರ್ಥಿಸಿಕೊಂಡಿದ್ದಾನೆ. ಎಲ್ಲ ಕೆಲಸಗಾರರನ್ನು ಸಮಾನವಾಗಿ ನೋಡುತ್ತೇನೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...