alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈ ಹೋಟೆಲ್ ನಲ್ಲಿ ಬೆಕ್ಕುಗಳಿಗೂ ಇದೆ ಕೆಲಸ

01-cat-wants-to-tell-you-laptop

ದುಬೈನ ಐಷಾರಾಮಿ ಹೋಟೆಲ್ ಒಂದು 8 ಬೆಕ್ಕುಗಳನ್ನು ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದೆ. ದಣಿದ ಉಳಿದ ನೌಕರರ ಜೊತೆಗೆ ಆಡುವುದೇ ಈ ಬೆಕ್ಕುಗಳ ಕಾಯಕ. ಹೋಟೆಲ್ ಉದ್ಯೋಗಿಗಳ ಒತ್ತಡ ಕಡಿಮೆ ಮಾಡುವ ಸಲುವಾಗಿ ಮಾಲೀಕರು ಈ ಪ್ಲಾನ್ ಮಾಡಿದ್ದಾರೆ.

ಅಬುಧಾಬಿಯಲ್ಲಿರೋ ಜನ್ನಾ ಹೋಟೆಲ್ & ರೆಸಾರ್ಟ್ ನಲ್ಲಿ ಯಾವಾಗಲೂ ಗ್ರಾಹಕರ ದಂಡು. ಹೋಟೆಲ್ ನೌಕರರಿಗೆ ಸ್ವಲ್ಪವೂ ಪುರುಸೊತ್ತಿಲ್ಲದಷ್ಟು ಕೆಲಸ. ಇದರಿಂದ ದೈಹಿಕ ಮತ್ತು ಮಾನಸಿಕ ಆಯಾಸವಾಗುತ್ತಿದೆ. ನೌಕರರ ಪಾಡನ್ನು ಗಮನಿಸಿದ ಮಾಲೀಕರು ಬೆಕ್ಕುಗಳನ್ನು ಕರೆತಂದು ಬಿಟ್ಟಿದ್ದಾರೆ.

ಕೆಲಸ ಮಾಡಿ ಮಾಡಿ ಸುಸ್ತಾದಾಗ ನೌಕರರು ಈ ಬೆಕ್ಕುಗಳ ಜೊತೆಗೆ ಆಡಿ ಒತ್ತಡವನ್ನೆಲ್ಲ ಕಡಿಮೆ ಮಾಡಿಕೊಳ್ಳಬಹುದು. ಈ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿರುವ 8 ಬೆಕ್ಕುಗಳು  ದಿನವಿಡಿ ಆಡುತ್ತ, ತುಂಟಾಟ ಚೇಷ್ಟೆ ಮಾಡುತ್ತ ಎಲ್ಲರನ್ನೂ ರಂಜಿಸುತ್ತವೆ.

ಇದರಿಂದ ಹೋಟಲ್ ನಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿ ಕೂಡ ತುಂಬಿದೆ. ಕಳೆದ ತಿಂಗಳು ಟೋಕಿಯೋದ ಐಟಿ ಸಂಸ್ಥೆಯೊಂದು ಉದ್ಯೋಗಿಗಳ ಒತ್ತಡ ಕಡಿಮೆ ಮಾಡಲೆಂದೇ 9 ಬೆಕ್ಕುಗಳನ್ನು ಹೈರ್ ಮಾಡಿಕೊಂಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...