alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತದೆ ಈ ಬಾಲಕನ ಸ್ಟೋರಿ

Anja-Ringgren-Loven-Nigerian-boy

ಕೆಲವೊಂದು ಸಮುದಾಯಗಳಲ್ಲಿ ಮನೆ ಮಾಡಿರುವ ಮೂಢನಂಬಿಕೆಗೆ ಆನೇಕರು ಬಲಿ ಪಶುಗಳಾಗುತ್ತಾರೆ. ನಂಬಿಕೆ ಹಾಗೂ ಆಚರಣೆಗಾಗಿ ಮುಗ್ದ ಜೀವಗಳು ಬಲಿಯಾಗುತ್ತವೆ. ಈ ರೀತಿ ಬಲಿಪಶುವಾದ ಬಾಲಕನ ಕಥೆ ಇಲ್ಲಿದೆ ನೋಡಿ.

ನೈಜೀರಿಯಾದ ಎರಡು ವರ್ಷದ ಈ ಬಾಲಕನನ್ನು ಆತನ ಪೋಷಕರೇ ಮನೆಯಿಂದ ಹೊರಗಟ್ಟಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಮೈ ಮೇಲೆ ಒಂದಿಂಚೂ ಬಟ್ಟೆಯಿಲ್ಲದೆ ಅಡ್ಡಾಡುತ್ತಿದ್ದ ಬಾಲಕ ರಸ್ತೆ ಬದಿ ಬಿಸಾಡಿದ ಆಹಾರ ಪದಾರ್ಥ ತಿಂದು ದಿನ ದೂಡುತ್ತಿದ್ದ.

ಈ ಬಾಲಕ ಅದೃಷ್ಟವಶಾತ್ ಇಂತಹ ಮಕ್ಕಳ ರಕ್ಷಣೆಗಾಗಿಯೇ ಅಫ್ರಿಕಾದಲ್ಲಿ ನೆಲೆಸಿರುವ ಡ್ಯಾನಿಶ್ ಮೂಲದ ಅಂಜಾ ರಿಂಗ್ರೆನ್ ಲೋವೆನ್ ಎಂಬ ಮಹಿಳೆಯ ಕಣ್ಣಿಗೆ ಬಿದ್ದಿದ್ದಾನೆ. ಆತನಿಗೆ ಕುಡಿಯಲು ನೀರು, ತಿನ್ನಲು ಆಹಾರ ಕೊಟ್ಟ ಆಕೆ ಬ್ಲಾಂಕೆಟ್ ಹೊದಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀವ್ರ ನಿತ್ರಾಣ ಸ್ಥಿತಿಯಲ್ಲಿದ್ದ ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಆತನಿಗೆ ‘ಹೋಪ್’ ಎಂದು ಹೆಸರಿಡಲಾಗಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ನೆರವಿಗೆ ಮನವಿ ಮಾಡಿ ಅಂಜಾ ರಿಂಗ್ರೆನ್ ಲೋವೆನ್ ಆತನ ಚಿತ್ರವನ್ನು ಹಾಕಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದುವರೆಗೂ 1 ಮಿಲಿಯನ್ ಡಾಲರ್ ಹಣ ಹರಿದುಬಂದಿದೆ. ಅಫ್ರಿಕಾ ಮಕ್ಕಳ ರಕ್ಷಣೆಗಾಗಿ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿರುವ ಅಂಜಾ ರಿಂಗ್ರೆನ್ ಲೋವೆನ್, ಉಳಿದ ಹಣವನ್ನು ಇಂತಹ ಮಕ್ಕಳ ರಕ್ಷಣೆಗೆ ಸದ್ಭಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...