alex Certify
ಕನ್ನಡ ದುನಿಯಾ       Mobile App
       

Kannada Duniya

48 ವರ್ಷಗಳ ಕಾಲ ಲಾಕ್ ಆಗಿದೆ ಈ ಐಫೋನ್, ಕಾರಣವೇನು ಗೊತ್ತಾ…?

ರಗಳೆ ಮಾಡುವ ಪುಟ್ಟ ಮಕ್ಕಳನ್ನು ಸಮಾಧಾನಪಡಿಸಲು ಕೆಲವರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ವಿಡಿಯೋ ಅಥವಾ ಅಡಿಯೋ ಪ್ಲೇ ಮಾಡಿ ಅವರಿಗೆ ಕೊಡುತ್ತಾರೆ. ಹೀಗೆ ಮಾಡುವವರು ಇನ್ನು ಮುಂದೆ ಹತ್ತಾರು ಬಾರಿ ಯೋಚಿಸುವುದು ಸೂಕ್ತ. ಏಕೆ ಅಂತೀರಾ? ಈ ಸುದ್ದಿ ಓದಿ.

ಚೀನಾದ ಶಾಂಘೈನಲ್ಲಿ ಈ ಪ್ರಕರಣ ನಡೆದಿದ್ದು, ತಾಯಿಯೊಬ್ಬಳು ತನ್ನ 2 ವರ್ಷದ ಮಗನ ಕೈಯ್ಯಲ್ಲಿ ಐಪೋನ್ ನೀಡಿದ್ದಳು. ಆ ಪುಟ್ಟ ಬಾಲಕ ಸತತವಾಗಿ ರಾಂಗ್ ಪಾಸ್ ವರ್ಡ್ ಒತ್ತಿದ್ದು, ಫೋನ್ ಈಗ 25,114,984 ಕಾಲ ಅಂದರೆ ಬರೋಬ್ಬರಿ 48 ವರ್ಷಗಳ ಕಾಲ ಲಾಕ್ ಆಗಿದೆಯಂತೆ.

ಮೊದಲ ಬಾರಿ ರಾಂಗ್ ಪಾಸ್ ವರ್ಡ್ ನಮೂದಿಸಿದ ವೇಳೆ ನಂತರದ ಪ್ರಯತ್ನಕ್ಕೆ 30 ಸೆಕೆಂಡ್ ಸಮಯವಿರುತ್ತದೆ. ಆದರೆ ಪದೇ ಪದೇ ರಾಂಗ್ ಪಾಸ್ ವರ್ಡ್ ನಮೂದಿಸುತ್ತಾ ಹೋದರೆ ನಂತರ ಪ್ರಯತ್ನಿಸುವ ಅವಧಿ ಹೆಚ್ಚುತ್ತಾ ಹೋಗುತ್ತದೆ. ಇಂತದೊಂದು ಟೆಕ್ನಾಲಜಿ ಐಫೋನ್ ನಲ್ಲಿದ್ದು, 48 ವರ್ಷಗಳ ಫೋನ್ ಲಾಕ್ ಆಗಲು ಆ ಪುಟ್ಟ ಬಾಲಕ ಅದೆಷ್ಟು ಬಾರಿ ರಾಂಗ್ ಪಾಸ್ ವರ್ಡ್ ನಮೂದಿಸಿರಬಹುದೆಂಬ ಚರ್ಚೆ ಈಗ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...