alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿಗಾಗಿ ಈ ಯುವಕರು ಮಾಡಿದ್ದಾರೆ ಹೀನ ಕೃತ್ಯ

two-turkish-men-were-caught-chopping-a-dogs-ears-off-for-a-perfect-selfieಈ ಯುವಕರು ಮಾಡಿದ ಹೀನ ಕೃತ್ಯದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರುಗಳ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಲ್ಫಿಗಾಗಿ ಈ ಕೃತ್ಯವೆಸಗಿರುವ ಯುವಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ.

ಇಂತದೊಂದು ಘಟನೆ ನಡೆದಿರುವುದು ಟರ್ಕಿಯಲ್ಲಿ. ಟರ್ಕಿಯ ಇಸ್ಪಾರ್ಟಾ ನಗರದ ಇಬ್ಬರು ಯುವಕರು ನಾಯಿಯೊಂದರ ಕಿವಿಗಳನ್ನು ಕತ್ತರಿಸಿ ಅವುಗಳನ್ನು ಕೈಯ್ಯಲ್ಲಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮಾನವೀಯ ಕೃತ್ಯವೆಸಗಿದ ಯುವಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಇಬ್ಬರು ಯುವಕರನ್ನು ವಶಕ್ಕೆ ಪಡೆದ ಪೊಲೀಸರು 4,404 ಲಿರಾ (1150 ಡಾಲರ್) ದಂಡ ವಿಧಿಸಿದ್ದಾರೆ. ಕೇವಲ ದಂಡ ವಿಧಿಸಿದರಷ್ಟೇ ಸಾಲದು ಇವರುಗಳಿಗೆ ಜೈಲು ಶಿಕ್ಷೆ ವಿಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...