alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಕಾರಿನಲ್ಲಿ ಸ್ಯಾಮ್ಸಂಗ್ ಮೊಬೈಲ್ ಸ್ಫೋಟ

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ 2016 ರಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು. ಅನೇಕ ಕಡೆ ಫೋನ್ ಸ್ಫೋಟಗೊಂಡ ವರದಿಯಾಗಿತ್ತು. ಘಟನೆ ಬಗ್ಗೆ ಕ್ಷಮೆ ಕೇಳಿದ್ದ ಸ್ಯಾಮ್ಸಂಗ್, ಮೊಬೈಲ್ ಬ್ಯಾಟರಿಯಲ್ಲಿ ಸಾಕಷ್ಟು ಸುಧಾರಣೆ ತಂದಿತ್ತು. ಆದ್ರೀಗ ಮತ್ತೊಮ್ಮೆ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಿರುವ ಸುದ್ದಿ ಹೊರಬಿದ್ದಿದೆ.

ಅಮೆರಿಕಾದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸ್ಯಾಮ್ಸಂಗ್ ನ 2 ಫೋನ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸಂದರ್ಶನವೊಂದರಲ್ಲಿ ಮಹಿಳೆ ಘಟನೆ ಬಗ್ಗೆ ವಿವರಿಸಿದ್ದಾಳೆ. ಕಾರ್ ಚಾಲನೆ ವೇಳೆ ಕಾರಿನಲ್ಲಿದ್ದ 2 ಸ್ಯಾಮ್ಸಂಗ್ ಮೊಬೈಲ್ ಗೆ ಬೆಂಕಿ ಹತ್ತಿಕೊಂಡಿತ್ತು ಎಂದು ಮಹಿಳೆ ತಿಳಿಸಿದ್ದಾಳೆ.

2017ರಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಹಾಗೂ 2013ರಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 4 ಸ್ಮಾರ್ಟ್ಫೋನ್ ಒಟ್ಟಿಗೆ ಸ್ಫೋಟಗೊಂಡಿದೆ ಎಂದು ಮಹಿಳೆ ಹೇಳಿದ್ದಾಳೆ. ಮೊಬೈಲ್ ಸ್ಫೋಟಗೊಳ್ತಿದ್ದಂತೆ ಕಾರ್ ನಿಲ್ಲಿಸಿ ಕಾರಿನಿಂದ ಮಹಿಳೆ ದೂರ ಓಡಿದ್ದಾಳೆ. ಬೆಂಕಿ ಹತ್ತಿಕೊಂಡ ಕಾರಿನ ವಿಡಿಯೋವನ್ನು ಮಹಿಳೆ ನೀಡಿದ್ದಾಳೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ಸ್ಯಾಮ್ಸಂಗ್ ಮುಂದಾಗಿದೆ. ತಂಡವೊಂದನ್ನು ತನಿಖೆಗೆ ನೇಮಕ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...