alex Certify
ಕನ್ನಡ ದುನಿಯಾ       Mobile App
       

Kannada Duniya

ಪರಸ್ಪರ ಡಿಕ್ಕಿ ಹೊಡೆದ ವಿಮಾನಗಳು: ಸಮುದ್ರದಲ್ಲಿ ಪತನ

Rescue boats search for wreckage from two small planes that collided in midair and plunged into the ocean off of Los Angeles harbor Friday, Feb. 5, 2016, in San Pedro, Calif. There was no immediate word of any survivors, authorities said. The planes collided at around 3:30 p.m. and apparently went into the water about two miles outside the harbor entrance, U.S. Coast Guard and other officials said. (AP  Photo/Damian Dovarganes)

ಇತ್ತೀಚೆಗೆ ವಿಮಾನ ಅಪಘಾತಗಳು ಹೆಚ್ಚುತ್ತಿದ್ದು, ಈ ನಡುವೆಯೇ ಎರಡು ಸಣ್ಣ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ 3.30 ರ ಸಮಯದಲ್ಲಿ (ಸ್ಥಳೀಯ ಕಾಲಮಾನ) ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಎರಡೂ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಸಮುದ್ರ ತೀರದಲ್ಲಿ ಪತನಗೊಂಡಿವೆ. ಈಗಾಗಲೇ ದೋಣಿಗಳು, ಹೆಲಿಕಾಪ್ಟರ್‌ ಗಳು ಹಾಗೂ ಮುಳುಗು ತಜ್ಞರನ್ನು ಬಳಸಿಕೊಂಡು ಪತ್ತೆ ಕಾರ್ಯ ಆರಂಭಿಸಲಾಗಿದೆ.

ಈ ವಿಮಾನಗಳಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಹಾಗೂ ಅವರು ಬದುಕುಳಿದಿದ್ದಾರೆಯೇ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಸುಮಾರು 90 ಅಡಿ ಆಳದ ನೀರಿಗೆ ವಿಮಾನಗಳು ಬಿದ್ದಿರುವುದರಿಂದ ಈಗಾಗಲೇ ಎಲ್ಲರೂ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...