alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಣೆಯಾಗಿದ್ದಾರೆ ಪಾಕ್ ಸೊಸೆಯಂದಿರು

br

ಒಂದೇ ಪರಿವಾರದ ಇಬ್ಬರು ಸೊಸೆಯಂದಿರು ನಾಪತ್ತೆಯಾಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಪಾಕಿಸ್ತಾನಿ ಮೂಲದ ಸೊಸೆಯಂದಿರು ಮಕ್ಕಳ ಜೊತೆ ಊರು ಬಿಟ್ಟಿದ್ದಾರೆನ್ನಲಾಗ್ತಾ ಇದೆ.

ಪಾಕಿಸ್ತಾನದ ನವೀರಾ ಹಾಗೂ ಆಯೆಷಾ ಅಹಮದಾಬಾದ್ ಕುಟುಂಬವೊಂದಕ್ಕೆ ಸೊಸೆಯಂದಿರಾಗಿ ಬಂದಿದ್ದರು. ಒಂದೇ ಮನೆಯ ಅಣ್ಣ-ತಮ್ಮನನ್ನು ಮದುವೆಯಾಗಿದ್ದರು.  ಅಕ್ಟೋಬರ್ 23 ರಂದು ನವೀರಾ ಹಾಗೂ ಆಯೆಷಾ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ನವೀರಾ ಕುಟುಂಬದ ಸದಸ್ಯರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಹಿಳೆಯರು ಪಾಕಿಸ್ತಾನದ ಪಾಸ್ ಪೋರ್ಟ್, ಮಕ್ಕಳ ಜನನ ದಾಖಲೆ ಹಾಗೂ ಮದುವೆ ದಾಖಲಾತಿ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಆಯೆಷಾಗೆ ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿತ್ತು. ನವೀರಾಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು. ಪಾಕಿಸ್ತಾನದ ಕರಾಚಿ ಮೂಲದವರೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...