alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿದಾದ ಸೇತುವೆ ಏರಿದ್ವು ಮೇಕೆಗಳು…!

ಆ ಎರಡು ಮೇಕೆಗಳು ಅದೇಗೋ 50 ಅಡಿ ಎತ್ತರದ ಸೇತುವೆಯ ಮೇಲೆರಿದ್ದವು. ಅಷ್ಟೇ ಅಲ್ಲ ಕಿರಿದಾದ ಸಣ್ಣ ಜಾಗದಲ್ಲಿ ಇಳಿದಿದ್ದು, ಅವುಗಳನ್ನು ರಕ್ಷಿಸಲು ಪರಿಪಾಟಲುಪಟ್ಟ ರಕ್ಷಣಾ ಸಿಬ್ಬಂದಿ ಕೊನೆಗೂ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿವೆ.

ಘಟನೆ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದು, ಕಿರಿದಾದ ಜಾಗದಲ್ಲಿದ್ದ ಮೇಕೆಗಳನ್ನು ಕಂಡು ಜನ ಆಶ್ಚರ್ಯಚಕಿತರಾಗಿದ್ದಾರೆ. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಫೋನಾಯಿಸಿದ್ದಾರೆ.

ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿಗೆ ಮೇಕೆಗಳನ್ನು ಹೇಗೆ ಸುರಕ್ಷಿತವಾಗಿ ಕೆಳಗಿಳಿಸಬೇಕೆಂಬ ಚಿಂತೆ ಆವರಿಸಿದೆ. ಹತ್ತಿರ ಹೋದರೆ ಭಯಗೊಂಡ ಅವುಗಳು ಕೆಳಕ್ಕೆ ಹಾರಿದರೆ ಹೇಗೆ ಎಂಬ ಆತಂಕವೂ ಕಾಡಿದೆ. ಕಡೆಗೂ ಉಪಾಯದಿಂದ ಎರಡು ಮೇಕೆಗಳನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...