alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ನಲ್ಲೇ ವಿಶ್ವ ಸುತ್ತಿದ್ದಾರೆ ಈ ಗೆಳೆಯರು

ಜೀವನದಲ್ಲಿ ಎಲ್ಲರಿಗೂ ಬೇರೆ ಬೇರೆಯದೇ ಆದ ಗುರಿಗಳಿರುತ್ತವೆ. ಇಲ್ಲಿ ಇಬ್ಬರು ಗೆಳೆಯರು ತಮ್ಮ ವಿಶಿಷ್ಟ ಗುರಿಯನ್ನು ಈಡೇರಿಸಿಕೊಂಡಿದ್ದಾರೆ.

ಮುಂಬೈ ಮೂಲದ ದೆಬಾಶಿಶ್ ಘೋಶ್ ಗೆ ತನ್ನ ಕನಸಿನ ಬೈಕ್ ಬಿಎಂಡಬ್ಲ್ಯೂ ಜಿಎಸ್ ಅಡ್ವೆಂಚರ್ ಮೋಟಾರ್ ಬೈಕ್ ನಲ್ಲಿಯೇ ವಿಶ್ವ ಪರ್ಯಟನೆ ಕೈಗೊಳ್ಳಬೇಕೆಂಬ ಮಹದಾಸೆಯಿತ್ತು. ಅದೂ ಕೂಡ ತನ್ನ ಪ್ರೀತಿಯ ಗೆಳೆಯ ಧರ್ಮೇಂದ್ರ ಜೈನ್  ಜೊತೆಗೆ. ಕಳೆದ ಜೂನ್ ತಿಂಗಳಲ್ಲಿ ಈ ಇಬ್ಬರೂ ಗೆಳೆಯರು ವಿಶ್ವ ಪ್ರವಾಸಕ್ಕೆ ಬೈಕ್ ನಲ್ಲಿ ತೆರಳಿದ್ದರು.

ಭಾರತದಿಂದ ಪ್ರವಾಸ ಆರಂಭಿಸಿದ ಇವರುಗಳು ಏಷ್ಯಾ ಹಾಗೂ ಯೂರೋಪ್ ನ ಬಹುಭಾಗ ಪ್ರವಾಸ ಮಾಡಿಕೊಂಡು ಅಮೆರಿಕಕ್ಕೆ ಬಂದಿದ್ದಾರೆ. 9 ತಿಂಗಳುಗಳ ಕಾಲ, ಸುಮಾರು 68 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿ, 34 ದೇಶಗಳನ್ನು ಸುತ್ತಿರೋ ಈ ಗೆಳೆಯರ ಜೋಡಿ ಶೀಘ್ರವೇ ಭಾರತಕ್ಕೆ ಮರಳೋದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...