alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಬಾಲಕರ ಸಾವು

bangla

ಕ್ಷಣಕ್ಷಣಕ್ಕೂ ಉಕ್ಕೇರುತ್ತಿದ್ದ ಪ್ರವಾಹದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಂಗ್ಲಾದೇಶದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಮೆಲಂಡಾದಲ್ಲಿ ಪ್ರವಾಹ ತೀವ್ರತೆಯಿಂದ ರಸ್ತೆ ಕೂಡ ಜಲಾವೃತವಾಗಿತ್ತು. ಅಲ್ಲಿ ನಿಂತು ಇಬ್ಬರೂ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ನೀರಿನ ಸೆಳೆತ ಹೆಚ್ಚಾಗಿದ್ದಿದ್ರಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದ್ರೂ ಸೆಲ್ಫಿ ತೆಗೆದುಕೊಳ್ಳಬೇಕು ಅಂತಾನೇ ಇಬ್ಬರೂ ಅಲ್ಲಿಗೆ ಬಂದಿದ್ರು ಅಂತಾ ಪೊಲೀಸರು ತಿಳಿಸಿದ್ದಾರೆ.

ಬಾಲಕರನ್ನು ರಕ್ಷಿಸಲು ಯತ್ನಿಸಿದ ಗ್ರಾಮಸ್ಥರಲ್ಲಿ ಓರ್ವ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ದಿನವಿಡೀ ಶೋಧಕಾರ್ಯ ನಡೆಸಿದ ಬಳಿಕ ಮೃತದೇಹಗಳು ಪತ್ತೆಯಾಗಿವೆ. ಪ್ರವಾಹದ ಅಬ್ಬರದಿಂದ ಬಾಂಗ್ಲಾದೇಶ ಭಾಗಶಃ ಜಲಾವೃತವಾಗಿದೆ.

56 ಮಂದಿ ಸಾವನ್ನಪ್ಪಿದ್ದು, 5 ಮಿಲಿಯನ್ ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 2 ಲಕ್ಷ ಮನೆಗಳು ನೆಲಸಮವಾಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...