alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಕ್ ಡೋನಾಲ್ಡ್ ಕೆಚಪ್ ತಿನ್ನುವ ಮೊದಲು ಇದನ್ನೊಮ್ಮೆ ಓದಿ

ಆಗಾಗ ಮೆಕ್ ಡೋನಾಲ್ಡ್ ಗೆ ಹೋಗಿ ಬರ್ಗರ್ ರುಚಿ ಸವಿಯುತ್ತಿದ್ದರೆ ಇದನ್ನು ಅವಶ್ಯಕವಾಗಿ ಓದಿ. ಮೆಕ್ ಡೋನಾಲ್ಡ್ ಕೆಚಪ್ ನಲ್ಲಿ ಹುಳು ಸಿಕ್ಕಿದೆ. ಇದ್ರ ವಿಡಿಯೋ ಟ್ವೀಟರ್ ನಲ್ಲಿ ವೈರಲ್ ಆಗಿದೆ. ಘಟನೆ ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಗರದಲ್ಲಿ ನಡೆದಿದೆ. ಈ ವಿಡಿಯೋ ನೋಡಿದ ನಂತ್ರ ಮೆಕ್ ಡೋನಾಲ್ಡ್ ಗೆ ಹೋಗಿ ಕೆಚಪ್ ಕೇಳೋದನ್ನು ಜನರು ನಿಲ್ಲಿಸಿದ್ರೂ ಆಶ್ಚರ್ಯವಿಲ್ಲ.

ಬೇಲಾ ರೀಚಿ ಹೆಸರಿನ ಮಹಿಳೆ ತನ್ನ ಟ್ವೀಟರ್ ಅಕೌಂಟ್ ನಲ್ಲಿ ಇದ್ರ ವಿಡಿಯೋ ಹಾಕಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈವರೆಗೆ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಕೆಚಪ್ ನಲ್ಲಿ ಹುಳವಿದೆ ಅಂತಾ ರೀಚಿ ಮೆಕ್ ಡೋನಾಲ್ಡ್ ಸಿಬ್ಬಂದಿಗೆ ತಿಳಿಸಿದ್ದಳಂತೆ. ಆದ್ರೆ ಅವ್ರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲವೆಂದು ರೀಚಿ ಹೇಳಿದ್ದಾಳೆ.

ರೀಚಿ ಪೋಸ್ಟ್ ಗೆ ಮೆಕ್ ಡೋನಾಲ್ಡ್ ಪ್ರತಿಕ್ರಿಯೆ ನೀಡಿದೆ. ನಮ್ಮಿಂದ ತಪ್ಪಾಗಿದೆ. ಇದಕ್ಕೆ ಕ್ಷಮೆ ಕೇಳುತ್ತೇವೆ. ಪ್ರಕರಣದ ತನಿಖೆ ನಡೆಸುತ್ತೇವೆಂದು ಮೆಕ್ ಡೋನಾಲ್ಡ್ ವಕ್ತಾರರು ಹೇಳಿಕೆ ನೀಡಿದ್ದಾರೆ. ಮೆಕ್ ಡೋನಾಲ್ಡ್ ಆಹಾರದಲ್ಲಿ ಹುಳ ಸಿಕ್ಕಿರುವುದು ಇದೇ ಮೊದಲಲ್ಲ. ಹಿಂದಿನ ವರ್ಷ ಆಸ್ಟ್ರೇಲಿಯಾದ ಮೆಕ್ ಡೋನಾಲ್ಡ್ ಒಂದರ ಬರ್ಗರ್ ನಲ್ಲಿ ಹುಳ ಸಿಕ್ಕಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...