alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಧ್ವಜವನ್ನು ತಪ್ಪಾಗಿ ಚಿತ್ರಿಸಿ ಟ್ರೋಲ್ ಗೊಳಗಾದ ಟ್ರಂಪ್

ವಿವಿಧ ವಿಚಾರಗಳಿಂದ ಟೀಕೆಗೊಳಗಾಗುತ್ತಿರುವ ಅಮೆರಿಕಾ ಅಧ್ಯಕ್ಷರು ಈಗ ಅತಿ ಸಣ್ಣ ವಿಚಾರವೊಂದರಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಅಮೆರಿಕಾ ರಾಷ್ಟ್ರದ ಧ್ವಜವನ್ನು ತಪ್ಪಾಗಿ ಚಿತ್ರಿಸಿ ಅಲ್ಲಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವೀಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.

ಹಳೆಯ ವೈಭವವನ್ನು ನೆನಪಿಸುವಂತೆ ತೋರುವ ಅಮೆರಿಕಾ ಧ್ವಜ ವಿಶ್ವದಲ್ಲಿ ಅತಿ ಸುಲಭವಾಗಿ ಗುರುತಿಸಬಹುದೆಂಬ ಮಾತಿದೆ. ಆದರೆ ಅಮೆರಿಕಾ ಅಧ್ಯಕ್ಷರೇ ಧ್ವಜವನ್ನು ತಪ್ಪಾಗಿ ಅರಿತಂತಿದೆ ಎಂದು ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ.

ಓಹಿಯೋದಲ್ಲಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಮಕ್ಕಳೊಂದಿಗೆ ಬೆರೆತಿದ್ದ ಸಂದರ್ಭದಲ್ಲಿ ಧ್ವಜದ ಕಲರಿಂಗ್ ಮಾಡಿದ್ದಾರೆ. ಈ ವೇಳೆ ತಮ್ಮ ರಾಷ್ಟ್ರದ ಧ್ವಜದ ಬಣ್ಣವನ್ನು ತುಂಬುವ ಬದಲು ಬೇರೆ ಬಣ್ಣ ತುಂಬಿದ್ದಾರೆ. ಈ ಸಂದರ್ಭದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದೆ.

ಅಮೆರಿಕಾ ಧ್ವಜವು 13 ಬಿಳಿ-ಕೆಂಪು ಪಟ್ಟಿ ಹಾಗೂ ಅದರೊಳಗೆ ನೀಲಿ ಆಯತದಲ್ಲಿ ಐವತ್ತು ಸ್ಟಾರ್ ಗಳನ್ನೊಳಗೊಂಡಿದೆ. ಟ್ರಂಪ್ ಕೆಂಪು ಪಟ್ಟಿಯ ಬದಲು ನೀಲಿ ಪಟ್ಟಿಯನ್ನು ರಚಿಸಿದ್ದಾರೆ. ಈ ರೀತಿ ಬಣ್ಣ ತುಂಬಿದ ಛಾಯಾ ಚಿತ್ರವನ್ನು ಅಮೆರಿಕಾದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...