alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟರ್ ಬಳಕೆದಾರರಿಗೆ ಸಂಭ್ರಮದ ಸುದ್ದಿ

twitter

ಆಧುನಿಕ ಜಗತ್ತಿನಲ್ಲಿ ಇಡೀ ವಿಶ್ವವೇ ಹಳ್ಳಿಯಂತಾಗಿದೆ. ಸಂಪರ್ಕ ಕ್ರಾಂತಿಯಿಂದಾಗಿ ಏನೆಲ್ಲಾ ಆಗಿವೆ ಎಂಬುದು ನಿಮಗೆ ತಿಳಿದೇ ಇದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಅಪಾರ ಸಂಖ್ಯೆಯ ಜನ ಬಳಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳು ಅತಿ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಅದರಲ್ಲಿಯೂ ಟ್ವಿಟರ್ ಬಳಕೆದಾರರ ಸಂಖ್ಯೆ 35 ಕೋಟಿಯಷ್ಟಿದೆ. ಇಂತಹ ಜನಪ್ರಿಯ ತಾಣವಾಗಿರುವ ಟ್ವಿಟರ್ ದಶಕದ ಸಂಭ್ರಮದಲ್ಲಿದೆ. 2006ರ ಮಾರ್ಚ್ 21ರಂದು ಆರಂಭವಾದ ಟ್ವಿಟರ್ ಕಳೆದ 10 ವರ್ಷಗಳಲ್ಲಿ ಗಳಿಸಿದ ಜನಪ್ರಿಯತೆ ಅಗಾಧವಾದುದು. ವಿಶ್ವದ ಅನೇಕ ನಾಯಕರು, ಸೆಲೆಬ್ರಿಟಿಗಳು ಈ ಸಾಮಾಜಿಕ ಜಾಲತಾಣವನ್ನು ಸದ್ಭಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ.

ಟ್ವಿಟರ್ ಸಿಇಓ ಜಾಕ್ ಡೋರ್ಸಿ ಹೇಳುವಂತೆ, ಟ್ವಿಟರ್ ನಲ್ಲಿ ನಿತ್ಯವೂ ಸುಮಾರು 35 ಕೋಟಿ ಹೊಸ ಸಂದೇಶ ದಾಖಲಾಗುತ್ತವೆ. ಅಲ್ಲದೇ, 100 ಕೋಟಿಗೂ ಹೆಚ್ಚು ಬಳಕೆದಾರರು ವೆಬ್ ಸೈಟ್ ಬಳಸುತ್ತಾರೆ ಎನ್ನಲಾಗಿದೆ. ಜಾಕ್ ಡೋರ್ಸಿ, ಇವಾನ್ ವಿಲಿಯಮ್ಸ್, ಬಿಝಕ್ ಸ್ಟೋನ್ ಹಾಗೂ ನೋವಾ ಗ್ಲಾಸ್ ಕಲ್ಪನೆಯಲ್ಲಿ ಈ ತಾಣ ಮೂಡಿಬಂದಿತ್ತು. 2006ರ ಮಾರ್ಚ್ ನಲ್ಲಿ ಆರಂಭವಾದರೂ ಜುಲೈನಲ್ಲಿ ಇದು ಉದ್ಘಾಟನೆಯಾಗಿತ್ತು. ಟ್ವಿಟರ್ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...