alex Certify
ಕನ್ನಡ ದುನಿಯಾ       Mobile App
       

Kannada Duniya

ಗಲಾಟೆ ಬೇಡ ಅಂತಾ ಬಟ್ಟೆ ತೊಡಿಸಿದ್ರು..!

download-1

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಯಾವ ಸ್ಥಾನ ನೀಡಲಾಗಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.ಅಲ್ಲಿನ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಬಹುತೇಕ ಕೆಲಸಗಳನ್ನು ಸೌದಿ ಮಹಿಳೆಯರು ಮಾಡುವಂತಿಲ್ಲ.ಅಲ್ಲಿನ ನಿಯಮವನ್ನು ಪಾಲಿಸದೆ ಹೋದಲ್ಲಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಮಧ್ಯೆ ಸೌದಿಯ ಕಂಪನಿಯೊಂದು ನೀಡಿದ ಜಾಹೀರಾತು ನಗುವಿಗೆ ಕಾರಣವಾಗಿದೆ.

ವಾಸ್ತವವಾಗಿ ಇದೊಂದು ಈಜುಕೊಳದ ಜಾಹೀರಾತಾಗಿದೆ. ಬಿರು ಬೇಸಿಗೆಯಲ್ಲಿ ಮನೆಯಲ್ಲಿಯೇ ಸುಲಭವಾಗಿ ಈಜುಕೊಳ ನಿರ್ಮಾಣ ಮಾಡಬಹುದೆಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಜಾಹೀರಾತಿನಲ್ಲಿ ತಂದೆ-ತಾಯಿ ಹಾಗೂ ಮೂವರು ಮಕ್ಕಳು ಕಾಣಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಮಹಿಳೆಯನ್ನು ತೋರಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ಈ ಜಾಹೀರಾತು ಪ್ರಚಾರ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ವಿರೋಧ ವ್ಯಕ್ತವಾಗುವುದು ಗ್ಯಾರಂಟಿ. ಹಾಗಾಗಿ ಜಾಹೀರಾತು ಕಂಪನಿ ಫೋಟೋಶಾಪ್ ಬಳಸಿ ಈಜುಕೊಳದಲ್ಲಿರುವವರ ಲುಕ್ ಬದಲಾಯಿಸಿದೆ.download-2

ಮಕ್ಕಳು ಹಾಗೂ ತಂದೆಗೆ ಫೋಟೋಶಾಪ್ ಸಹಾಯದಿಂದ ಬಟ್ಟೆ ಹಾಕಲಾಗಿದೆ. ಆದ್ರೆ ಮಹಿಳೆಯನ್ನು ಅಲ್ಲಿಂದ ತೆಗೆದು ಹಾಕಲಾಗಿದ್ದು, ಮಹಿಳೆ ಜಾಗದಲ್ಲಿ ಗೊಂಬೆಯನ್ನು ಕೂರಿಸಲಾಗಿದೆ. ಇದು ಟ್ವೀಟರ್ ನಲ್ಲಿ ವೈರಲ್ ಆಗಿದ್ದು, ಅನೇಕರ ಹಾಸ್ಯವಸ್ತುವಾಗಿ ಮಾರ್ಪಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...