alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಳ್ಳೆ ಕೊಂದಿದ್ದಕ್ಕೆ ಬಂದ್ ಆಯ್ತು ಟ್ವೀಟರ್ ಅಕೌಂಟ್

ಸೊಳ್ಳೆ ಕೊಂದಿದ್ದು ವ್ಯಕ್ತಿಯೊಬ್ಬನ ಟ್ವೀಟರ್ ಅಕೌಂಟ್ ಬಂದ್ ಆಗಲು ಕಾರಣವಾಗಿದೆ. ವ್ಯಕ್ತಿ ಸಾಯಿಸಿದ ಸೊಳ್ಳೆಯ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದಾನೆ. ಈ ಪೋಸ್ಟ್ ನಂತ್ರ ಟ್ವೀಟರ್ ಆತನ ಟ್ವೀಟರ್ ಅಕೌಂಟ್ ಬಂದ್ ಮಾಡಿದೆ.

ಆತನ ಪತ್ನಿ ಟಿವಿ ನೋಡ್ತಿದ್ದಾಗ ಸೊಳ್ಳೆ ಕಚ್ಚಿತ್ತಂತೆ. ಈ ಸೊಳ್ಳೆಯನ್ನು ಸಾಯಿಸಿದ್ದ ವ್ಯಕ್ತಿ, ಸತ್ತ ಸೊಳ್ಳೆಯ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದ. ಇದಾದ ನಂತ್ರ ಟ್ವೀಟರ್ ನಿಂದ ಒಂದು ಸಂದೇಶ ಬಂದಿತ್ತು. ನಿಮ್ಮ ಅಕೌಂಟ್ ಬಂದ್ ಆಗಿದೆ. ಇನ್ನು ಎಂದೂ ಅಕೌಂಟ್ ತೆರೆದುಕೊಳ್ಳುವುದಿಲ್ಲವೆಂದು ಸಂದೇಶದಲ್ಲಿ ಹೇಳಲಾಗಿತ್ತು.

ಸೊಳ್ಳೆ ಕೊಂದ ವ್ಯಕ್ತಿ ಸೋಲೊಪ್ಪಿಕೊಳ್ಳಲಿಲ್ಲ. @DaydreamMatcha ಹೆಸರಿನಲ್ಲಿ ಇನ್ನೊಂದು ಟ್ವೀಟರ್ ಅಕೌಂಟ್ ಓಪನ್ ಮಾಡಿದ್ದಾನೆ. ಒಂದು ಸೊಳ್ಳೆ ಕೊಂದಿದ್ದಕ್ಕೆ ನನ್ನ ಹಳೆ ಅಕೌಂಟ್ ಬಂದ್ ಮಾಡಲಾಗಿದೆ. ಇದು ತಪ್ಪಾ ಎಂದು ಪ್ರಶ್ನೆ ಮಾಡಿದ್ದಾನೆ.

ಬೇಸರದಲ್ಲಿ ಈ ವ್ಯಕ್ತಿ ಮಾಡಿದ ಟ್ವಿಟ್ 31 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವಿಟ್ ಆಗಿದೆ. 27 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...