alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ: ಅವಳಿ ಮಕ್ಕಳಿಗೆ ಒಂದೇ ಅಮ್ಮ, ತಂದೆ ಮಾತ್ರ ಬೇರೆ ಬೇರೆ..!

twin-babies-1_jvYadnN

ಅವಳಿ –ಜವಳಿ ಮಕ್ಕಳ ರೂಪ, ಬಣ್ಣ ಸಾಮಾನ್ಯವಾಗಿ ಒಂದೇ ರೀತಿ ಇರುತ್ತೆ. ಕೆಲವೊಮ್ಮೆ ತಂದೆ ತಾಯಿಗೆ ಕೂಡ ಮಕ್ಕಳನ್ನು ಗುರುತಿಸುವುದು ಕಷ್ಟವಾಗಿಬಿಡುತ್ತದೆ. ಆದ್ರೆ ವಿಯೆಟ್ನಾಂನಲ್ಲಿ ಮಹಿಳೆಯೊಬ್ಬಳಿಗೆ ಜನಿಸಿದ ಅವಳಿ ಮಕ್ಕಳು ತದ್ವಿರುದ್ಧವಾಗಿವೆ. ಅದೇ ಈಗ ದಂಪತಿಯನ್ನು ಬೇರೆ ಮಾಡಿದೆ.

ನಿಜ, ಅವಳಿ ಮಕ್ಕಳ ರೂಪ, ಬಣ್ಣವೇ ಈಗ ಒಂದು ಸತ್ಯವನ್ನು ಹೊರ ಹಾಕಿದೆ. ಅದ್ರ ಪ್ರಕಾರ ಅವಳಿ ಮಕ್ಕಳ ತಾಯಿ ಒಬ್ಬಳೆ. ಆದ್ರೆ ತಂದೆ ಮಾತ್ರ ಬೇರೆ ಬೇರೆ. ವಿಯಟ್ನಾಂನಲ್ಲಿ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮಕ್ಕಳು ಮಾತ್ರ ಅವಳಿಯಂತೆ ಕಾಣ್ತಾ ಇರಲಿಲ್ಲ. ಸಂಬಂಧಿಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸರಿ, ತಂದೆ- ತಾಯಿ ಡಿ ಎನ್ ಎ ಪರೀಕ್ಷೆಗೆ ಮುಂದಾಗಿದ್ದಾರೆ. ಆದ್ರೆ ಡಿ ಎನ್ ಎ ವರದಿ ಮಾತ್ರ ದಂಗಾಗಿಸಿದೆ. ವರದಿಯಲ್ಲಿ ಅವಳಿ ಮಕ್ಕಳ ಡಿ ಎನ್ ಎ ಬೇರೆ ಬೇರೆಯಾಗಿರುವುದು ಕಂಡು ಬಂದಿದೆ. ಮಹಿಳೆ, ಪತಿಯ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ದಿನವೇ ಬೇರೆ ಪುರುಷನೊಂದಿಗೂ ಸಂಬಂಧ ಬೆಳೆಸಿದ್ದಾಳೆ. ಇಬ್ಬರ ಎಗ್ ಕೂಡ ಬೆಳೆದಿದೆ. ಇದ್ರಿಂದಾಗಿ ಅವಳಿ ಮಕ್ಕಳು ಜನಿಸಿವೆ ಎಂದು ಅಂದಾಜಿಸಲಾಗಿದೆ. ಇದೇ ವಿಷಯ ಈಗ ಪತಿ- ಪತ್ನಿಯನ್ನು ದೂರ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...