alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅವಳಿಗಳ ಹಸಿವು ನೀಗುವುದೇ ಇಲ್ಲ..!

l_2-1473604767ಅಮೆರಿಕದ ಕನೆಕ್ಟಿಕಟ್ ನಿವಾಸಿಗಳಾದ ಸ್ಟೀವ್ ಮತ್ತು ಎಡ್ಡಿ ಎಂಬ ಅವಳಿಗಳು ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗಿರುವ ಖಾಯಿಲೆಯಿಂದ ಇವರಿಗೆ ದಿನದ 24 ಗಂಟೆ ಹಸಿವಾಗುತ್ತಲೇ ಇರುತ್ತದೆ.

ಪ್ರಾಡೆರ್ ವಿಲ್ಲಿ ಸಿಂಡ್ರೋಮ್ ಖಾಯಿಲೆ ಇರುವವರಿಗೆ ಈ ರೀತಿ ಹಸಿವು ಕಾಣಿಸಿಕೊಳ್ಳುತ್ತದೆ. ಪ್ರಾಡೆರ್ ವಿಲ್ಲಿ ಖಾಯಿಲೆ ಸಾಮಾನ್ಯವಾಗಿ 25000 ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಈ ಖಾಯಿಲೆಯಿರುವ ಮಕ್ಕಳಿಗೆ ತೀರ ಹಸಿವಾಗುತ್ತದೆ ಮತ್ತು ಹಸಿವಾದೊಡನೆ ಅವರ ಮಾಂಸಖಂಡಗಳು ಶಕ್ತಿಹೀನಗೊಂಡು ಮಾತುಗಳು ತೊದಲಲಾರಂಭಿಸುತ್ತವೆ.

ಸ್ಟೀವ್ ಮತ್ತು ಎಡ್ಡಿಯ ತಾಯಿ ಡಾಯ್ನಾ ಅರ್ಹೆನ್ ಮಕ್ಕಳಿಗಿರುವ ಈ ಖಾಯಿಲೆಯಿಂದ ಬಹಳ ನೊಂದಿದ್ದಾರೆ. ಈ ಅವಳಿ ಮಕ್ಕಳಿಗೆ ಎಷ್ಟು ಹಸಿವಾಗುತ್ತದೆಂದರೆ ಅವರು ಒಮ್ಮೊಮ್ಮೆ ಕಸದ ಬುಟ್ಟಿಯಲ್ಲಿರುವ ಕಸವನ್ನು ಕೂಡ ಸೇವಿಸುತ್ತಾರೆ. ಹಾಗಾಗಿ ಡಾಯ್ನಾ ಕಸದ ಬುಟ್ಟಿ, ಫ್ರಿಜ್ ಎಲ್ಲವನ್ನೂ ಲಾಕ್ ಮಾಡಿ ಇಡುತ್ತಾರೆ.

ವಿಪರೀತ ಹಸಿವನ್ನು ಸಹಿಸಿಕೊಳ್ಳಲಾರದ ಸ್ಟೀವ್ ಮತ್ತು ಎಡ್ಡಿ ಹಿಂಸಾತ್ಮಕವಾಗಿ ವರ್ತಿಸುವುದೂ ಉಂಟು. 12 ವರ್ಷದ ಈ ಅವಳಿಗಳು ಈಗಲೇ 82 ಕೆ.ಜಿ ತೂಗುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...