alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೈಮ್ ರಿಪೋರ್ಟಿಂಗ್ ವೇಳೆಯೇ ನಡೀತು ಅಪರಾಧ

suv

ಡೌನ್ಟೌನ್ ಅಲ್ಬುಕರ್ಕ್ ನಲ್ಲಿ ಸುದ್ದಿ ವಾಹಿನಿಯ ಸಿಬ್ಬಂದಿಯ ವಾಹನವನ್ನೇ ಕಳ್ಳರು ಎಸ್ಕೇಪ್ ಮಾಡಿದ್ದಾರೆ. ಆ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳ ಬಗ್ಗೆ ವರದಿ ಮಾಡಲು ಕೆಓಬಿ ನ್ಯೂಸ್ ನ ವರದಿಗಾರರು ಆಗಮಿಸಿದ್ರು.

ಎಸ್ ಯು ವಿ ಕಾರನ್ನು ಒಂದೆಡೆ ನಿಲ್ಲಿಸಿ ಅಲ್ಲೇ ಸಮೀಪದಲ್ಲಿ ನಿಂತು ವರದಿ ನೀಡ್ತಾ ಇದ್ರು. ಈ ವೇಳೆ ದುಷ್ಕರ್ಮಿಗಳು ಮಾಧ್ಯಮದವರ ಕಾರನ್ನೇ ಅಪಹರಿಸಿದ್ದಾರೆ. ಸ್ಟೋರಿ ಮಾಡಲು ಬಂದವರೇ ಅಲ್ಲಿ ಸ್ಟೋರಿಯಾಗಿಬಿಟ್ಟಿದ್ದಾರೆ.

ವಾಹನದಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಕಳವಾಗಿ ಅರ್ಧ ಗಂಟೆಯೊಳಗೆ ಪೊಲೀಸರ ಸಹಾಯವನ್ನೂ ಪಡೆಯದೆ ಸುದ್ದಿ ವಾಹಿನಿಯ ಸಿಬ್ಬಂದಿ ಅದನ್ನು ಪತ್ತೆ ಮಾಡಿದ್ದಾರೆ. ಕಾರಿನ ಬಾಗಿಲು ಲಾಕ್ ಆಗಿತ್ತು, ಕೀ ಕೂಡ ಒಳಗಡೆ ಇರಲಿಲ್ಲ. ಆದ್ರೂ ಕಳ್ಳ ಅದನ್ನು ಸ್ಟಾರ್ಟ್ ಮಾಡಿಕೊಂಡು ಹೋಗಿದ್ಹೇಗೆ ಅನ್ನೋದೇ ಎಲ್ಲರ ಕುತೂಹಲ.

ಸುದ್ದಿವಾಹಿನಿಯ ನಿರ್ದೇಶಕರು ಮಾತ್ರ ತಮ್ಮ ವರದಿಗಾರರ ಮೇಲೆ ಸಿಟ್ಟಾಗಿದ್ದಾರೆ. ಕ್ರೈಮ್ ಬಗ್ಗೆ ವರದಿ ಮಾಡುವಾಗ ಕಣ್ಣೆದುರಲ್ಲೇ ಕ್ರೈಮ್ ನಡೆದಿರೋದು ಅವರ ಕೋಪಕ್ಕೆ ಕಾರಣ. ಇದು ವರದಿಗಾರರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...