alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಶೋನಲ್ಲಿ ತಪ್ಪೊಪ್ಪಿಕೊಂಡ ಕೊಲೆಗಾರ

39aa6fe500000578-3867362-image-m-11_1477320354056

ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ವ್ಯಕ್ತಿಯೊಬ್ಬ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಟಿವಿ ಕಾರ್ಯಕ್ರಮದಲ್ಲಿ ತಪ್ಪೊಪ್ಪಿಕೊಂಡ ಕಾಮುಕನನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆ.

ಟರ್ಕಿ ಚಾನೆಲ್ ನ ಫ್ರೈಂ ಟೈಂನಲ್ಲಿ ಆ್ಯಂಕರ್, ಅಪರಾಧಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಾಳೆ. ಪ್ರಕರಣಕ್ಕೆ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸ್ತಾಳೆ. ಹಾಗೆ ಮನೆ ಮುಂದೆ ಆಡ್ತಾ ಇದ್ದ ನಾಲ್ಕು ವರ್ಷದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾಳೆ.

ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದ Himmet Akturk ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆ್ಯಂಕರ್ ಕೇಳಿದ ಪ್ರಶ್ನೆಗೆ ಕಣ್ಣ ರು ಹಾಕಿದ Himmet Akturk, ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವುದಾಗಿ ತಿಳಿಸಿದ್ದಾನೆ. ಚೀಲದಲ್ಲಿ ಬಾಲಕಿಯ ಮೃತದೇಹ ತುಂಬಿ ಕಸದಬುಟ್ಟಿಗೆ ಎಸೆಯಲು ಪ್ರಯತ್ನಿಸಿದ್ದೆ. ಆದ್ರೆ ಬುಟ್ಟಿ ತುಂಬಿದ್ದರಿಂದ ದ್ರಾಕ್ಷಿ ತೋಟದಲ್ಲಿ ಹೂತಿರುವುದಾಗಿ ಹೇಳಿದ್ದಾನೆ. ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...