alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತವರ ಮೂಢನಂಬಿಕೆಯಿಂದ ಮಗುವಿನ ಕಣ್ಣೇ ಹೋಯ್ತು

eye

ಚಿಕ್ಕ ಚಿಕ್ಕ ಮಕ್ಕಳಿಗೂ ಈಗ ಕ್ಯಾನ್ಸರ್ ನಂತರ ಮಾರಕ ಖಾಯಿಲೆಗಳು ಆವರಿಸಿಕೊಳ್ತಿವೆ. ಹೆತ್ತವರಿಗೆ ಇಂತಹ ಖಾಯಿಲೆಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೇ ಇದ್ರೆ ಅದು ಮಕ್ಕಳ ಜೀವಕ್ಕೇ ಕುತ್ತು ತರಬಲ್ಲದು. ಇನ್ನು ಕೆಲವರು ವೈದ್ಯರಿಂದ ಚಿಕಿತ್ಸೆ ಪಡೆಯೋದು ಬಿಟ್ಟು ಮೂಢನಂಬಿಕೆಗಳ ಮೊರೆ ಹೋಗ್ತಾರೆ.

ಪಪುವಾ ನ್ಯೂ ಗಿನಿಯಾದಲ್ಲಿ ಹೆತ್ತವರ ಅಂಧ ವಿಶ್ವಾಸದಿಂದಾಗಿ 3 ವರ್ಷದ ಮಗು ಕಣ್ಣನ್ನೇ ಕಳೆದುಕೊಂಡಿದೆ. ಮಗುವಿನ ಕಣ್ಣು ಊದಿಕೊಂಡು ಕೆಂಪಗಾಗಿತ್ತು. ಪೋಷಕರು ಹತ್ತಿರದಲ್ಲೇ ಇದ್ದ ವೈದ್ಯರಿಗೆ ತೋರಿಸಿದ್ದಾರೆ, ಅವರು ಕೊಟ್ಟ ಔಷಧದಿಂದ ಕಡಿಮೆಯಾಗಿರಲಿಲ್ಲ.

ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ಬದಲು ಹೆತ್ತವರು ಇದೆಲ್ಲಾ ಭೂತದ ಕಾಟ ಅಂತಾ ಭಾವಿಸಿ ಮಾಂತ್ರಿಕನ ಬಳಿ ತೆರಳಿದ್ದಾರೆ. ಮಾಂತ್ರಿಕನ ಮಾಟ ಮಂತ್ರ ಕೂಡ ಪ್ರಭಾವ ಬೀರಲಿಲ್ಲ. ಮಗುವಿನ ಕಣ್ಣು ಪೂರ್ತಿಯಾಗಿ ಊದಿಕೊಂಡು ಬಿಟ್ಟಿತ್ತು. ಮುಖವೂ ದಪ್ಪಗಾಗಿತ್ತು. ಕೊನೆಗೆ ಬೇರೆ ವೈದ್ಯರ ಬಳಿ ಕರೆದೊಯ್ದಿದ್ದಾರೆ.

ಅಸಲಿಗೆ ಮಗುವಿನ ಕಣ್ಣುಗಳಲ್ಲಿ ಗಡ್ಡೆ ಬೆಳೆದಿತ್ತು. ಮಗು ಕಣ್ಣಿನ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ಕೂಡಲೇ ರೇಡಿಯೋ ಥೆರಪಿ ಮಾಡದೇ ಇದ್ದಲ್ಲಿ ಮಗು ಬದುಕುವುದೇ ಕಷ್ಟ ಅಂತಾ ವೈದ್ಯರು ತಿಳಿಸಿದ್ದಾರೆ. ಈಗ ಪೋಷಕರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಮಗುವಿನ ಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...