alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಮೇಲಿನ ತೆರಿಗೆ ಕುರಿತು ಟ್ರಂಪ್ ಹೇಳಿದ್ದೇನು…?

ಭಾರತದಲ್ಲೂ ಅಮೆರಿಕದ ಉತ್ಪನ್ನಗಳ ಬೆಲೆ ಕಡಿಮೆ ಮಾಡಬೇಕು ಅನ್ನೋದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ವಾದ. ಅದರಲ್ಲೂ ಹಾರ್ಲೆ ಡೇವಿಡ್ಸನ್ ಬೈಕ್ ನ ಬೆಲೆ ಕಡಿಮೆ ಮಾಡದೇ ಇದ್ರೆ ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತೆರಿಗೆ ಹೇರುವುದಾಗಿ ಬೆದರಿಕೆ ಹಾಕಿದ್ದಾರೆ.

ಬದಲಿ ತೆರಿಗೆ ಯೋಜನೆ ಹಮ್ಮಿಕೊಳ್ಳೋದಾಗಿ ಟ್ರಂಪ್ ಹೇಳಿದ್ದಾರೆ. ಉಳಿದ ರಾಷ್ಟ್ರಗಳು ಶೇ.50ರಷ್ಟು ತೆರಿಗೆ ಹೇರಿದ್ರೆ, ಅಮೆರಿಕ ಕೂಡ ಅಷ್ಟೇ ತೆರಿಗೆ ಹೇರಬೇಕು ಅನ್ನೋದು ಟ್ರಂಪ್ ವಾದ. ಅಮೆರಿಕ ಮೂಲದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಭಾರತ ಆಮದು ಸುಂಕ ಹೇರಿರುವುದಕ್ಕೆ ಟ್ರಂಪ್ ಆಕ್ಷೇಪಿಸುತ್ತಿದ್ದಾರೆ.

ಅಮೆರಿಕದಲ್ಲಿ ವಿದೇಶಿ ಬೈಕ್ ಗಳ ಮೇಲೆ ಶೂನ್ಯ ಸುಂಕವಿದೆ. ಹಾಗಾಗಿ ಉಳಿದ ರಾಷ್ಟ್ರಗಳು ಕೂಡ ಅದನ್ನೇ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ. ಟ್ರಂಪ್ ನಿರ್ಧಾರದಿಂದ ಕೆನಡಾ, ಮೆಕ್ಸಿಕೋ ಹಾಗೂ ಚೀನಾದ ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...