alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಮೊತ್ತಕ್ಕೆ ಹರಾಜಾಗಿದೆ ಟ್ರಂಪ್ ಬಳಸಿದ್ದ ಫೆರಾರಿ ಕಾರು

ferari

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸಿದ್ದ ಫೆರಾರಿ ಕಾರನ್ನು ಹರಾಜು ಹಾಕಲಾಗಿದೆ. 270,000 ಡಾಲರ್ ಗೆ ಈ ಕಾರು ಹರಾಜಾಗಿದೆ. 2007ರಲ್ಲಿ ಟ್ರಂಪ್ ಫೆರಾರಿ F430 F1 Coupe ಕಾರನ್ನು ಕೊಂಡುಕೊಂಡಿದ್ರು. ಈ ಕಾರನ್ನು ಟ್ರಂಪ್ ಹೆಚ್ಚು ಬಳಸಿರಲಿಲ್ಲ. ಇದರಲ್ಲಿ ಕೇವಲ 2400 ಮೈಲು ಪ್ರಯಾಣಿಸಿದ್ದರು.

2011ರಲ್ಲಿ ಟ್ರಂಪ್ ಕಾರನ್ನು ಮಾರಾಟ ಮಾಡಿದ್ದರು. ಫ್ಲೋರಿಡಾದಲ್ಲಿ ಈ ಸೂಪರ್ ಕಾರನ್ನು ಹರಾಜು ಹಾಕಲಾಗಿದೆ. ಈ ಕಾರು ಹರಾಜಿನಲ್ಲಿ ಮಾರಾಟವಾಗುವುದೇ ಇಲ್ಲ ಅಂತಾ ಹೇಳಲಾಗ್ತಿತ್ತು. ಆರಂಭದಲ್ಲಿ 245,000 ಡಾಲರ್ ಗೆ ಬಿಡ್ಡಿಂಗ್ ನಡೆದಿತ್ತು. ಆದ್ರೆ ಈ ಮೊತ್ತ ಮೂಲ ಬೆಲೆಗೆ ಸಮನಾಗಿ ಇಲ್ಲದೇ ಇದ್ದಿದ್ರಿಂದ ಹರಾಜು ಹಾಕಿರಲಿಲ್ಲ.

ಇಷ್ಟು ವರ್ಷಗಳಲ್ಲಿ ಈ ಐಷಾರಾಮಿ ಕಾರು ಕೇವಲ 6000 ಮೈಲು ಓಡಿದೆ. ಸುಮಾರು 1.75 ಕೋಟಿ ರೂಪಾಯಿ ಕೊಟ್ಟು ವ್ಯಕ್ತಿಯೊಬ್ಬ ಹರಾಜಿನಲ್ಲಿ ಕಾರನ್ನು ಕೊಂಡುಕೊಂಡಿದ್ದು, ಆತನ ಹೆಸರನ್ನು ಬಹಿರಂಗಪಡಿಸಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...