alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರಿಗೆ ಟ್ರಂಪ್ ಹೀಗೆಲ್ಲಾ ಹೇಳಿದ್ದಾರಂತೆ…!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ನಡುವಿನ ಹಾಸ್ಯದ ಮಾತುಕತೆಗಳ, ತಮಾಷೆ, ಕೀಟಳೆಗೆ ಸಂಬಂಧಿಸಿದ ವಿದೇಶಿ ಮಾಧ್ಯಮದ ವರದಿಯೊಂದು ಈಗ ವಿಶ್ವ ರಂಗದಲ್ಲಿ ನಗೆ ಬುಗ್ಗೆ ಉಕ್ಕಿಸುತ್ತಿದೆ. ಅದರಲ್ಲೂ ಟ್ರಂಪ್ ಮೋದಿಯವರನ್ನ ಗೆಳೆತನದ ಅಡ್ವಾನ್ಟೇಂಜ್ ತೆಗೆದುಕೊಂಡು ಕಾಲೆಳೆದ ಪ್ರಸಂಗಗಳು ತುಂಬಾನೇ ಫನ್ನಿ ಅನ್ನಿಸುತ್ತಿದೆ.

ಮೋದಿಯವರನ್ನ ಅಮೆರಿಕಕ್ಕೆ ಆಹ್ವಾನಿಸಿದ್ದ ಸಂದರ್ಭದಲ್ಲಿ ಟ್ರಂಪ್ ನೀವ್ಯಾಕೆ ನಿಮ್ಮ ಪತ್ನಿಯ ಜೊತೆ ಬಂದಿಲ್ಲ ಅಂತ ಕೀಟಲೆ ಮಾಡಿದ್ದರಂತೆ. ಮೋದಿಯವರ ಜೀವನ ಗಾಥೆ ತಿಳಿದ ನಂತರದಲ್ಲಿ ಟ್ರಂಪ್ ಹಾಗಾದ್ರೆ ನಾನು ನಿಮ್ಮ ಹೆಸರನ್ನು ಯಾರೊಂದಿಗೆ ಬೇಕಾದ್ರು ಥಳುಕು ಹಾಕಬಹುದಾ ಅಂತ ತಮಾಷೆ ಮಾಡಿದ್ದರಂತೆ. ಅಲ್ಲದೆ ನಾನೇ ನಿಮಗೆ ಪರ್ಫೆಕ್ಟ್ ಮ್ಯಾಚ್ ಮೇಕರ್ ಅಂತ ಕಿಚಾಯಿಸಿದ್ದರಂತೆ.

ಇನ್ನು ಟ್ರಂಪ್ ದಡ್ಡತನಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಸಂಗಗಳು ನಡೆದಿವೆಯಂತೆ. ದಕ್ಷಿಣ ಏಷ್ಯಾದ ರಾಷ್ಟ್ರಗಳ ಹೆಸರನ್ನು ಟ್ರಂಪ್ ತಪ್ಪಾಗಿ ಉಚ್ಚರಿಸಿದ್ದರಂತೆ. ನೇಪಾಳವನ್ನ ನಿಪ್ಪಾಳ್ ಎಂದು, ಭೂತಾನ್ ನ್ನ ಬಟನ್ ಎಂದು ಟ್ರಂಪ್ ಹೇಳಿದ್ದರಂತೆ. ಅಲ್ಲದೇ ನೇಪಾಳ ಮತ್ತು ಭೂತಾನ್ ಗಳೆರಡು ಭಾರತದ ರಾಜ್ಯಗಳು ಅಂತ ಟ್ರಂಪ್ ಭಾವಿಸಿದ್ದರಂತೆ. ಆ ಸ್ಥಳಗಳು ಎಲ್ಲಿವೆ ಅನ್ನೋದು ಕೂಡ ಆರಂಭದಲ್ಲಿ ಟ್ರಂಪ್ ಗೆ ಗೊತ್ತಿರಲಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...