alex Certify
ಕನ್ನಡ ದುನಿಯಾ       Mobile App
       

Kannada Duniya

ಒತ್ತಡಕ್ಕೆ ಮಣಿದು ಆದೇಶ ಹಿಂಪಡೆದ ಅಮೆರಿಕ ಅಧ್ಯಕ್ಷ ಟ್ರಂಪ್

ವಲಸಿಗ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ವಿವಾದಾತ್ಮಕ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಪಸ್ ಪಡೆದಿದ್ದು, ಆದರೆ ಅಕ್ರಮವಾಗಿ ಗಡಿ ನುಸುಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಅಮೆರಿಕಾ-ಮೆಕ್ಸಿಕೋ ಗಡಿಯಲ್ಲಿ ವಲಸಿಗ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ವೇಳೆ ಅವರನ್ನು ಬಿಟ್ಟಿರಲಾಗದ ಮಕ್ಕಳು ಅಳುತ್ತಿರುವ ದೃಶ್ಯ ಎಲ್ಲರ ಮನ ಕಲಕಿತ್ತು. ಜಾಗತಿಕ ಮಟ್ಟದಲ್ಲೂ ಈ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ಟ್ರಂಪ್ ವಿರುದ್ಧ ಟೀಕೆಯ ಸುರಿಮಳೆಯಾಗಿತ್ತು.

ಟ್ರಂಪ್ ಪತ್ನಿ ಮೆಲಾನಿಯಾ ಹಾಗೂ ಪುತ್ರಿ ಇವಾಂಕಾ ಕೂಡ ಮಕ್ಕಳನ್ನು ಬೇರ್ಪಡಿಸುವ ಆದೇಶಕ್ಕೆ ವಿರೋಧ ಸೂಚಿಸಿದ್ದಲ್ಲದೆ ಅದನ್ನು ರದ್ದುಗೊಳಿಸುವಂತೆ ಟ್ರಂಪ್ ಅವರಿಗೆ ಮನವಿ ಮಾಡಿದ್ದರು.

ಈ ಎಲ್ಲ ಒತ್ತಡಗಳಿಗೆ ಮಣಿದ ಡೊನಾಲ್ಡ್ ಟ್ರಂಪ್ ತಮ್ಮ ಆದೇಶವನ್ನು ಹಿಂಪಡೆದಿದ್ದು, ಈಗಾಗಲೇ ಪೋಷಕರಿಂದ ಬೇರೆಯಾಗಿರುವ 2500 ಮಕ್ಕಳನ್ನು ಮತ್ತೆ ಅವರ ಮಡಿಲಿಗೆ ಸೇರಿಸಲು ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...