alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಹಾರಾಡಲಿದೆ ‘ಟ್ರಂಪ್ ಬೇಬಿ’ ಬಲೂನ್

ಲಂಡನ್ ಪಾರ್ಲಿಮೆಂಟ್ ಭವನದ ಸಮೀಪದಲ್ಲಿ ಸುಮಾರು 30 ಮೀಟರ್ ಎತ್ತರದಲ್ಲಿ ಅಂದ್ರೆ ಭೂಮಿಯಿಂದ 90 ಅಡಿಯ ಮೇಲೆ ದೈತ್ಯಾಕಾರದ ಬಲೂನ್ ಒಂದು ಹಾರಾಡಲಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಡೈಪರ್ ತೊಟ್ಟ ಮಗುವಿನ ರೂಪದಲ್ಲಿ ಬಲೂನ್ ಆಗಿ ಹಾರಾಡಲಿದ್ದಾರೆ. ಅಂದ ಹಾಗೆ ಇದು ಟ್ರಂಪ್ ಲಂಡನ್ ಭೇಟಿಯನ್ನ ವಿರೋಧಿಸಿ ಮಾಡುತ್ತಿರುವಂತ ಪ್ರತಿಭಟನೆಯ ಪರಿ.

ಹೌದು….ಜುಲೈ 13ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೂರು ದಿನಗಳ ಕಾಲ ರಾಜತಾಂತ್ರಿಕ ಭೇಟಿಗಾಗಿ ಲಂಡನ್ ಗೆ ಆಗಮಿಸುತ್ತಿದ್ದಾರೆ. ಡೋನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸೋಕೆ ಲಂಡನ್ ಮೇಯರ್ ಅವರಿಗೆ ಪ್ರತಿಭಟನಾಕಾರರು ಅನುಮತಿಯನ್ನ ಕೇಳಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಟ್ರಂಪ್ ಲಂಡನ್ ಪ್ರವಾಸವನ್ನು ವಿರೋಧಿಸಿ ಬಲೂನ್ ಮೇಲೆ ಸಹಿ ಮಾಡಿದ್ದಾರೆ.

ಟ್ರಂಪ್ ಲಂಡನ್ ಪ್ರವಾಸದ ವೇಳೆ ಪಾರ್ಲಿಮೆಂಟ್ ಭವನದ ಮುಂದೆ ಭಾಷಣ ಮಾಡಲಿದ್ದಾರೆ. ಆ ಸ್ಟೇಜ್ ನ ಕೇಂದ್ರ ಬಿಂದುವಾಗಿ ಈ ಬಲೂನ್ ಹಾರಾಡುವಂತೆ ಮಾಡೋದಕ್ಕೆ ಲಂಡನ್ ಮೇಯರ್ ಸಾದೀಕ್ ಖಾನ್ ಅನುಮತಿ ನೀಡಿದ್ದಾರೆ. ಸ್ಟಾಪ್ ಟ್ರಂಪ್ ಹೆಸರಿನಲ್ಲಿ ಪ್ರತಿಭಟನಾಕಾರರು ನಡೆಸಲು ಉದ್ದೇಶಿಸಿರುವ ಶಾಂತಿಯುತ ರ್ಯಾಲಿಗೂ ಮೇಯರ್ ಅನುಮತಿಯನ್ನ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...