alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ ಈಕೆಯ ಫೋಟೋ

trump-aide-kneels-on-white-house-sofa-with-shoes-on-angers-twitteratiಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಶ್ವೇತಭವನದ ಓವಲ್ ಕಛೇರಿಯಲ್ಲಿ ವಿವಿಧ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆ ಶ್ವೇತ ಭವನದ ಸಲಹೆಗಾರ್ತಿ ಕೆಲ್ಲಿಆ್ಯನೆ ಕಾನ್ವೆ ತೋರಿರುವ ವರ್ತನೆ ಈಗ ಟ್ವಿಟ್ಟಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಓವಲ್ ಕಛೇರಿಯ ಸೋಫಾದ ಮೇಲೆ ಶೂ ಹಾಕಿಕೊಂಡು ಕಾಲು ಮಡಚಿ ಕುಳಿತಿರುವ ಕೆಲ್ಲಿಆ್ಯನೆ ಕಾನ್ವೆ, ಮಹತ್ವದ ಮಾತುಕತೆ ಸಂದರ್ಭದಲ್ಲಿ ತಮ್ಮ ಮೊಬೈಲ್ ನೋಡುತ್ತಿರುವ ಈ ಚಿತ್ರದ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಆಕ್ರೋಶದ ಕಮೆಂಟ್ ಗಳು ಕೇಳಿ ಬಂದಿವೆ.

ಇದಕ್ಕೆ ಪ್ರತಿಯಾಗಿ ಕೆಲವರು, ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಅಧಿಕಾರಾವಧಿ ವೇಳೆ ಮಹತ್ವದ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಎದುರಿನ ಮೇಜಿನ ಮೇಲೆ ಕಾಲಿಟ್ಟು ಕುಳಿತಿರುವ ಫೋಟೋಗಳನ್ನು ಹಾಕಿ ತಿರುಗೇಟು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...