alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಕ್ ಚಾಲಕನ ಯಡವಟ್ಟಿಗೆ ಕಾರು ಚಾಲಕ ಕಂಗಾಲು

truck-drags-car_650x400_81492842389ಅಮೆರಿಕಾದ ಕ್ಯಾಲಿಪೋರ್ನಿಯಾ ಹೈವೇಯಲ್ಲಿ ನಡೆದಿರುವ ಅಪಘಾತವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಈಗಾಗಲೇ 6 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಟ್ರಕ್ ಡ್ರೈವರ್ ಮಾಡಿದ ಯಡವಟ್ಟಿಗೆ ಕಾರು ಚಾಲಕನೊಬ್ಬ ಕಂಗಾಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎರಡು ಲಾರಿಗಳನ್ನು ಸಾಗಿಸುತ್ತಿದ್ದ ಬೃಹತ್ ಟ್ರಕ್ ಒಂದು, ತಿರುವಿನಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಕಾರು ಜಖಂಗೊಂಡಿದ್ದು, ಟ್ರಕ್ ಹಿಂಬದಿಗೆ ಸಿಲುಕಿಕೊಂಡಿದೆ. ಇದ್ಯಾವುದು ಟ್ರಕ್ ಚಾಲಕನ ಗಮನಕ್ಕೆ ಬಂದಿಲ್ಲ. ಆತ ತನ್ನ ಪಾಡಿಗೆ ತಾನು ಟ್ರಕ್ ಚಲಾಯಿಸಿಕೊಂಡು ಹೋಗುತ್ತಿದ್ದರೆ ಕಾರಿನಲ್ಲಿದ್ದ ಚಾಲಕ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.

ಸುಮಾರು 4 ಮೈಲಿ ದೂರದವರೆಗೂ ಕಾರನ್ನು ಟ್ರಕ್ ಎಳೆದುಕೊಂಡು ಹೋಗಿದ್ದು, ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನ ಚಾಲಕ ಇದನ್ನು ಗಮನಿಸಿ ಟ್ರಕ್ ಅಡ್ಡಗಟ್ಟಿದ್ದಾನೆ. ಆಗ ಟ್ರಕ್ ಚಾಲಕನಿಗೆ ತಾನು ಮಾಡಿದ ಪ್ರಮಾದದ ಅರಿವಾಗಿದೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...