alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಾನ್ಸ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ

Bastille Day truck attack

ಪ್ಯಾರಿಸ್: ಕೆಲ ತಿಂಗಳ ಹಿಂದಷ್ಟೇ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಅಟ್ಟಹಾಸ ಮೆರೆದು, ನೂರಾರು ಮಂದಿಯನ್ನು ಬಲಿ ಪಡೆದಿದ್ದ ಉಗ್ರರು, ಮತ್ತೆ ನರಮೇಧ ನಡೆಸಿದ್ದಾರೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಂದೇ ನರಮೇಧ ನಡೆಸಲಾಗಿದೆ.

ಫ್ರಾನ್ಸ್ ನಲ್ಲಿ ಬ್ಯಾಸ್ಟಿಲ್ಲೇ ಡೇ ಆಚರಣೆ ಸಂದರ್ಭದಲ್ಲಿ ಉಗ್ರರು ಅಟ್ಟಹಾಸ ಮೆರೆದು, ಬರೋಬ್ಬರಿ 80 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಪ್ಯಾರಿಸ್ ಪ್ರಮುಖ ನಗರ ನೈಸ್ ಎಂಬಲ್ಲಿ ಜನ ರಾಷ್ಟ್ರೀಯ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಿದ್ದಾಗ ಏಕಾಏಕಿ ಟ್ರಕ್ ನುಗ್ಗಿಸಲಾಗಿದೆ. ಅಲ್ಲದೇ, ಬಾಂಬ್ ದಾಳಿ ಮಾಡಲಾಗಿದೆ. ಟ್ರಕ್ ನಲ್ಲಿ ಭಾರೀ ಪ್ರಮಾಣದಲ್ಲಿ ಸ್ಪೋಟಕ ಮತ್ತು ಗ್ರೆನೇಡ್ ಪತ್ತೆಯಾಗಿವೆ. ಏಕಾಏಕಿ ಟ್ರಕ್ ನುಗ್ಗಿ ಬಂದ ಕಾರಣ, ಅದಕ್ಕೆ ಸಿಲುಕಿ 80 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಕ್ ನುಗ್ಗಿಸಿದ ಹಂತಕನನ್ನು ಭದ್ರತಾ ಪಡೆಯ ಸಿಬ್ಬಂದಿ ಹೊಡೆದುರುಳಿಸಿವೆ. ಟ್ರಕ್ ನಲ್ಲಿ ಭಾರೀ ಪ್ರಮಾಣದ ಸ್ಪೋಟಕ ಪತ್ತೆಯಾಗಿದೆ. ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ, ತುರ್ತು ಸಭೆ ನಡೆಸಿದ್ದಾರೆ. ಫ್ರಾನ್ಸ್ ನಲ್ಲಿ ಕಳೆದ 15 ತಿಂಗಳ ಅವಧಿಯಲ್ಲಿ ನಡೆದ 3 ನೇ ಸಾಮೂಹಿಕ ಹತ್ಯಾಕಾಂಡ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...