alex Certify
ಕನ್ನಡ ದುನಿಯಾ       Mobile App
       

Kannada Duniya

ಮರವಾಗ್ತಿರುವ ಮನುಷ್ಯ..!

bangladesh-1

ಇಪ್ಪತ್ತೈದು ವರ್ಷದ ವ್ಯಕ್ತಿ ದಿನೇ ದಿನೇ ಮರವಾಗ್ತಾ ಇದ್ದಾನೆ. ಜಗತ್ತಿನಾದ್ಯಂತ ವೈದ್ಯರು ಇದನ್ನು ಗುಣಪಡಿಸುವಲ್ಲಿ ಮಗ್ನರಾಗಿದ್ದಾರೆ. ವ್ಯಕ್ತಿಯ ಜೀವ ಉಳಿಸುವ ಪ್ರಯತ್ನದಲ್ಲಿದ್ದಾರೆ. ಆದ್ರೆ ಈವರೆಗೂ ಯಾವ ವೈದ್ಯರಿಗೂ ಇದು ಸಾಧ್ಯವಾಗಿಲ್ಲ. ಆ ವ್ಯಕ್ತಿಯ ಹೆಸರು ಅಬ್ದುಲ್ ಬಜನದಾರ್. ಆದ್ರೆ ಆತನನ್ನು ಜನರು ಟ್ರೀ ಮೆನ್ ಎಂದು ಕರೆಯುತ್ತಾರೆ.

ಆತನ ಕೈ ಬೆರಳುಗಳು ಮರದ ಕೊಂಬೆಗಳಾಗಿ ಮಾರ್ಪಟ್ಟಿವೆ. ಕಾಲು ಬೆರಳುಗಳು ಕೂಡ ಮರದ ರೆಂಬೆ, ಕೊಂಬೆಗಳಾಗುತ್ತ ಬಂದಿವೆ. ಏಳು ವರ್ಷಗಳ ಹಿಂದೆ ಢಾಕಾದಲ್ಲಿ ಅಬ್ದುಲ್ ಆಟೋ ಓಡಿಸುತ್ತಿದ್ದ. ಒಂದು ದಿನ ಆತನ ಬೆರಳುಗಳು ಮರದ ಒಣಗಿದ ರೆಂಬೆಗಳು ರೂಪ ಪಡೆಯಲಾರಂಭಿಸಿದವು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಢಾಕಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗಲೂ ಅಬ್ದುಲ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ವೈದ್ಯ ಸಮಂತ್ ಲಾಲ್ ಸೇನ್ ಅಬ್ದುಲ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಪ್ರಕಾರ ವೈರಸ್ ಕಾರಣದಿಂದಾಗಿ ಈ ರೋಗ ಕಾಣಿಸಿಕೊಳ್ಳುತ್ತದೆಯಂತೆ. ಇದಕ್ಕೆ ಈವರೆಗೆ ಔಷಧಿ ಕಂಡು ಹಿಡಿದಿಲ್ಲ. ಈ ಹಿಂದೆ ಇಂಡೋನೇಷ್ಯಾ ವ್ಯಕ್ತಿಯೊಬ್ಬ ಈ ಖಾಯಿಲೆಯಿಂದ ಬಳಲಿದ್ದನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...