alex Certify
ಕನ್ನಡ ದುನಿಯಾ       Mobile App
       

Kannada Duniya

ಅವಶೇಷಗಳಡಿ ಸಿಲುಕಿದ್ದ ಮಹಿಳೆ ಜೀವ ಉಳಿಸಿದೆ ವಾಟ್ಸಾಪ್ ಮೆಸೇಜ್

ಟನ್ ಗಟ್ಟಲೆ ತೂಕದ ಅವಶೇಷ, ಸುತ್ತಲೂ ಗಾಡಾಂಧಕಾರ. ಸತತ 16 ಗಂಟೆಗಳಿಂದ ಕುಡಿಯಲು ಹನಿ ನೀರಿಲ್ಲ, ಆಹಾರವಂತೂ ದೂರದ ಮಾತು. ಕುಟುಕು ಜೀವ ಕೈಯಲ್ಲಿ ಹಿಡಿದಿದ್ದ ಡಯಾನಾ ಪ್ಯಾಚೆಕೊಗೆ ಬದುಕುವ ಆಸೆ ಕಮರುತ್ತಿತ್ತು. ಮೆಕ್ಸಿಕೋದಲ್ಲಿ ನಡೆದ ಭೀಕರ ಭೂಕಂಪದ ವೇಳೆ ಡಯಾನಾ ಕೆಲಸ ಮಾಡುತ್ತಿದ್ದ ಕಚೇರಿ ಕುಸಿದು ಬಿದ್ದಿತ್ತು.

ಘಟನೆ ನಡೆದ ತಕ್ಷಣವೇ ಡಯನಾ ತನ್ನ ಪತಿ ಜುವಾನ್ ಗೆ ಮೆಸೇಜ್ ಕಳಿಸಿದ್ಲು. ಸೀಲಿಂಗ್ ಕುಸಿಯುತ್ತಿದೆ, ಸ್ಟೇರ್ ಕೇಸ್ ಬಳಿ ನಾಲ್ವರು ಸಿಕ್ಕಿಹಾಕಿಕೊಂಡಿದ್ದೇವೆ, ಪ್ಲೀಸ್ ಬಚಾವ್ ಮಾಡು ಅಂತಾ. ಆ ಸಂದೇಶ 16 ಗಂಟೆಗಳ ನಂತರ ಜುವಾನ್ ಗೆ ತಲುಪಿತ್ತು. ಡಯಾನಾಗಾಗಿ ಅಳುತ್ತ ಕುಸಿದ ಕಟ್ಟಡದ ಬಳಿ ನಿಂತಿದ್ದ ಜುವಾನ್ ಮೆಸೇಜ್ ಬರುತ್ತಿದ್ದಂತೆ ರಕ್ಷಣಾ ಪಡೆಯನ್ನು ಅರಸಿಕೊಂಡು ಹೋದ.

ಭೂಕಂಪದ ನಂತರ ಮೊಬೈಲ್ ನೆಟ್ವರ್ಕ್ ಸಮಸ್ಯೆಯಾಗಿತ್ತು. ಡಯಾನಾಳ ಫೋನ್ ಕೂಡ ಅವಶೇಷಗಳಡಿ ಸಿಲುಕಿದ್ದರಿಂದ ಮೆಸೇಜ್ ಡೆಲಿವರಿಯಾಗಿರಲಿಲ್ಲ. ಆದ್ರೆ ಆಕೆಯ ಅದೃಷ್ಟ ಚೆನ್ನಾಗಿದ್ದಿದ್ರಿಂದ 16 ಗಂಟೆಗಳ ಬಳಿಕ, ಜುವಾನ್ ಗೆ ಮೆಸೇಜ್ ತಲುಪಿದೆ. ರಕ್ಷಣಾ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿ ಡಯಾನಾ ಹಾಗೂ ಇತರ ಮೂವರನ್ನು ರಕ್ಷಣೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...