alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯ ಘಟನೆ: ಮಗು ಹೆತ್ತ ಪುರುಷ

man-bab

ನ್ಯೂಯಾರ್ಕ್: ಜಗತ್ತಿನಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ಜರುಗುತ್ತವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಪುರುಷನೊಬ್ಬ ಮಗುವಿಗೆ ಜನ್ಮ ನೀಡಿದ ಪ್ರಕರಣ ಅಮೆರಿಕದಲ್ಲಿ ನಡೆದಿದೆ.

ಜನ್ಮತಃ ಹೆಣ್ಣಾಗಿದ್ದ ಇವಾನ್ ಎಂಬಾತ, 16 ವರ್ಷಗಳ ಹಿಂದೆ ಲಿಂಗ ಪರಿವರ್ತನೆ ಮಾಡಿಸಿಕೊಂಡು ಗಂಡಾಗಿದ್ದ. ತನ್ನ 19 ನೇ ವಯಸ್ಸಿನಲ್ಲಿ ಇವಾನ್ ಗಂಡಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ, ಹೆಣ್ಣಿನ ಗುಣ ಲಕ್ಷಣ ಉಳಿದಿದ್ದವು. ಮುಂದೆ ತಾನು ಗರ್ಭವತಿಯಾಗಬೇಕೆಂಬ ಉದ್ದೇಶದಿಂದ ಅಗತ್ಯವಿರುವ ಅಂಗಾಂಗಗಳನ್ನು ಆತ ಉಳಿಸಿಕೊಂಡಿದ್ದು, ಈಗ ಸಂಗಾತಿಯ ಒಪ್ಪಿಗೆ ಪಡೆದು ಗರ್ಭವತಿಯಾಗಿದ್ದ.

ಬೋಸ್ಟನ್ ಆಸ್ಪತ್ರೆಯಲ್ಲಿ ಕೃತಕ ಗರ್ಭಧಾರಣೆ ಮೂಲಕ ಗರ್ಭವತಿಯಾಗಿದ್ದ ಇವಾನ್, ಕೆಲವು ದಿನಗಳ ಹಿಂದೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾನೆ. ಹೆಣ್ಣಾಗಿ ಜನಿಸಿ, ಗಂಡಾಗಿ ಬದಲಾಗಿ ಮಗು ಹೆತ್ತಿರುವ ಇವಾನ್ ಪ್ರಕರಣದ ಅಮೆರಿಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...