alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ತಾಯಿಯಾಗಿದ್ದಾನೆ ತೃತೀಯ ಲಿಂಗಿ ಪುರುಷ

ತಾಯ್ತನ ಅನ್ನೋದು ಒಂದು ವಿಶಿಷ್ಟ ಅನುಭೂತಿ. ಸಾಮಾನ್ಯವಾಗಿ ಮಗುವನ್ನು ಗರ್ಭದಲ್ಲಿ ಹೊತ್ತು, ಹೆರೋದು ಮಹಿಳೆಯರೇ. ಆದ್ರೆ ಈ ಆಧುನಿಕ ಯುಗದಲ್ಲಿ ಮಹಿಳೆಯರೇ ಮಗು ಹೆರಬೇಕು ಅನ್ನೋ ಚೌಕಟ್ಟಿಲ್ಲ. ಯಾಕಂದ್ರೆ ತೃತೀಯ ಲಿಂಗಿ ಪುರುಷನೊಬ್ಬ ಎರಡನೇ ಬಾರಿ ಮಗುವಿಗೆ ಜನ್ಮ ನೀಡಿದ್ದಾನೆ.

ಕಾಸಿ ಸುಲ್ಲಿವಾನ್ ಎಂಬಾತ ಮೊದಲು ಮಹಿಳೆಯಾಗಿ ಗರ್ಭ ಧರಿಸಿದ್ದ, ಮಗುವಿಗೆ ಜನ್ಮ ನೀಡಿದ್ದ. ನಾಲ್ಕು ವರ್ಷಗಳ ಹಿಂದೆ ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ. ಈಗ ಆತನಿಗೆ ಮತ್ತೊಂದು ಮಗು ಜನಿಸಿದೆ. ಒಬ್ಬ ಮಹಿಳೆ ಮತ್ತು ಪುರುಷ ಎರಡೂ ಆಗಿ ಮಗುವಿಗೆ ಜನ್ಮ ನೀಡಿದ ಮೊದಲ ವ್ಯಕ್ತಿ ಇವನು.

ಸತತ 7 ದಿನಗಳ ಕಾಲ ಕಾಸಿ ಸುಲ್ಲಿವಾನ್ ಗೆ ಹೆರಿಗೆ ನೋವು ಕಾಡಿತ್ತು. ನಂತರ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ. ಕಾಸಿ ಸುಲ್ಲಿವಾನ್ ಕಾಲೇಜು ವಿದ್ಯಾರ್ಥಿ. ಸ್ಟೀವನ್ ಎಂಬಾತನೊಂದಿಗೆ ಸಂಬಂಧ ಬೆಳೆಸಿ ಕಳೆದ ಫೆಬ್ರವರಿಯಲ್ಲಿ ಗರ್ಭ ಧರಿಸಿದ್ದ. 2010ರಲ್ಲಿ ಈತನಿಗೆ ಮದುವೆಯಾಗಿತ್ತು, ಮೊದಲ ಮಗುವಿಗೆ 3 ತಿಂಗಳುಗಳಾಗಿದ್ದಾಗ ಕಾಸಿ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದಿದ್ದನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...