alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣಾಗಿ ಬದಲಾಗಿದ್ದವನು 7 ತಿಂಗಳ ನಂತರ ಮಾಡಿದ್ದೇನು?

ಇತ್ತೀಚಿನ ದಿನಗಳಲ್ಲಿ ಲಿಂಗ ಬದಲಾವಣೆ ಮಾಡಿಕೊಳ್ಳೋದು ಕೂಡ ಒಂಥರಾ ಕ್ರೇಝ್ ಆಗಿಬಿಟ್ಟಿದೆ. ಇಬ್ಬರು ಮಕ್ಕಳ ತಂದೆಯೊಬ್ಬ ಮದುವೆಯಾಗಿ 8 ವರ್ಷಗಳ ನಂತರ ಲಿಂಗ ಬದಲಾವಣೆ ಮಾಡಿಕೊಂಡು ಮಹಿಳೆಯಾಗಿದ್ದ. ಆದ್ರೆ ಕೇವಲ 7 ತಿಂಗಳುಗಳಲ್ಲೇ ಮತ್ತೆ ಅವನ ಮನಸ್ಸು ಚೇಂಜ್ ಆಗಿದೆ, ಪುನಃ ಪುರುಷನಾಗಿ ಬದಲಾಗಿದ್ದಾನೆ.

36 ವರ್ಷದ ಜೇಮ್ ಕೋಹೆನ್ ಕಳೆದ ವರ್ಷ ತಾನು ಮಹಿಳೆಯಾಗಿ ಬದಲಾಗುತ್ತೇನೆ ಅಂತಾ ಪತ್ನಿ ಎರಿಯನ್ ಬಳಿ ಹೇಳಿದ್ದ. ಕಾರಾ ಅಂತ ತನಗೆ ತಾನೇ ನಾಮಕರಣ ಮಾಡಿಕೊಂಡಿದ್ದ. ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿ, ಉದ್ದನೆಯ ತಲೆಗೂದಲ ವಿಗ್, ಹೆಂಗಸರ ಡ್ರೆಸ್ ಹಾಗೂ ಹೈ ಹೀಲ್ಸ್ ಧರಿಸುತ್ತಿದ್ದ.

ಪತಿ ಲಿಂಗ ಬದಲಾವಣೆ ಮಾಡಿಸಿಕೊಂಡು ಹೆಣ್ಣಾಗಿ ಪರಿವರ್ತನೆಯಾಗಿದ್ದರಿಂದ ಪತ್ನಿ ಎರಿಯನ್ ಆತನಿಂದ ದೂರವಾಗಿದ್ದಳು. ಬೇರೊಬ್ಬ ಗೆಳೆಯನನ್ನು ಹುಡುಕಿಕೊಂಡು ಪೋರ್ಚುಗಲ್ ನಲ್ಲಿ ನೆಲೆಸಿದ್ಲು. ಆದ್ರೆ ಹೆಣ್ಣಾಗಿ ಬದಲಾಗಿದ್ದ ಜೇಮ್ ಕೋಹೆನ್ ಗೆ ಅದೇನಾಯ್ತೋ ಗೊತ್ತಿಲ್ಲ.

ದಿಢೀರನೆ ವಿಗ್, ಹೈ ಹೀಲ್ಸ್, ಹೆಂಗಸರು ಉಡುಪು ಧರಿಸೋದನ್ನು ಬಿಟ್ಟಿದ್ದಾನೆ. ಗಡ್ಡ ಬಿಟ್ಟು ಮತ್ತೆ ಪುರುಷನ ಗೆಟಪ್ ಗೆ ಮರಳಿದ್ದಾನೆ. ಆತನ ಇಬ್ಬರು ಹೆಣ್ಣುಮಕ್ಕಳಿಗೆ ಸಹ, ತಂದೆ ಮಹಿಳೆಯಾಗಿರುವ ಬಗ್ಗೆ ಎರಿಯನ್ ಮನವರಿಕೆ ಮಾಡಿಕೊಟ್ಟಿದ್ದಳು. ಆದ್ರೀಗ ದಿಢೀರನೆ ಮತ್ತೆ ಆತ ಪುರುಷನಾಗಿರೋದು ಎಲ್ಲರಿಗೂ ಅಚ್ಚರಿ ತಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...