alex Certify
ಕನ್ನಡ ದುನಿಯಾ       Mobile App
       

Kannada Duniya

ಕುರೂಪವಾಗಿದ್ದೇನೆಂದು ದುಡುಕಿದ್ದಳು 11 ರ ಬಾಲೆ…!

11 ವರ್ಷದ ಬಾಲಕಿಯೊಬ್ಳು ತಾನು ಸುಂದರವಾಗಿಲ್ಲ ಅಂತಾ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾನು ಆತ್ಮಹತ್ಯೆ ಮಾಡಿಕೊಳ್ತಿರೋದ್ಯಾಕೆ ಅನ್ನೋದನ್ನು ಸಾವಿಗೂ ಮುನ್ನ ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಮಿಲ್ಲಿ ಟ್ಯೂಮಿ ಎಂಬ ಬಾಲಕಿ ಡಬ್ಲಿನ್ ನ ತನ್ನ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ಲು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆ 3 ದಿನಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಮಿಲ್ಲಿ ಆರೋಗ್ಯವಾಗಿದ್ಲು. ಆದ್ರೆ ತನ್ನ ದೇಹದ ಆಕಾರದ ಬಗ್ಗೆ ಅವಳಲ್ಲಿ ಬೇಸರವಿತ್ತು. ತಾನು ಯಾವಾಗ ಸಾಯಬೇಕು ಎಂಬುದನ್ನು ನಿರ್ಧರಿಸಿದ್ದೇನೆ ಅಂತಾ ಇನ್ ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ಲು.

ಅದನ್ನು ನೋಡಿದ ಮಿಲ್ಲಿ ಸ್ನೇಹಿತರು ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಮಿಲ್ಲಿಯ ಅಕ್ಕ ಕೂಡ ಅದೇ ಸ್ಕೂಲ್ ನಲ್ಲಿ ಓದುತ್ತಿದ್ಲು. ನಂತರ ಮಿಲ್ಲಿಯ ಹೆತ್ತವರನ್ನು ಕರೆಸಿ ಶಿಕ್ಷಕರು ಈ ವಿಚಾರ ತಿಳಿಸಿದ್ರು. ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ ಮಿಲ್ಲಿಗೆ ಕೌನ್ಸಿಲಿಂಗ್ ಹಾಗೂ ಫಿಸಿಯೋಥೆರಪಿ ಮಾಡಿಸಲು ಪೋಷಕರು ನಿರ್ಧರಿಸಿದ್ರು.

ಆದ್ರೆ ಆ ವೈದ್ಯರು ಸಂಪರ್ಕಕ್ಕೇ ಸಿಗಲಿಲ್ಲ. ಅರ್ಹರಲ್ಲದ ಥೆರಪಿಸ್ಟ್ ಒಬ್ಬರು ಮಿಲ್ಲಿಗೆ ಚಿಕಿತ್ಸೆ ನೀಡಲಾರಂಭಿಸಿದ್ರು. ಪ್ರತಿ ವಾರವೂ ಚಿಕಿತ್ಸೆ ಇರುತ್ತಿತ್ತು. ಆದ್ರೆ ಚಿಕಿತ್ಸೆಯ ಜೊತೆಜೊತೆಗೆ ಮಿಲ್ಲಿ ಆತ್ಮಹತ್ಯೆಯ ಡೈರಿಯನ್ನು ಕೂಡ ಸಿದ್ಧಪಡಿಸಿಕೊಂಡಿದ್ಲು. ಆ ಡೈರಿ ಅವಳ ತಾಯಿಯ ಕೈಗೆ ಸಿಕ್ಕಿದೆ.

ಹೆತ್ತವರು ಮುಂದೇನು ಮಾಡಬೇಕು ಅನ್ನೋ ಚಿಂತೆಯಲ್ಲಿದ್ರು. ಅಂದು ಮನೆಯವರೆಲ್ಲ ಒಟ್ಟಾಗಿ ಊಟ ಮಾಡಿದ್ದಾರೆ. ಸಿನೆಮಾ ವೀಕ್ಷಿಸಿದ್ದಾರೆ. ತನಗೆ ಬೋರ್ ಆಗ್ತಿದೆ ಎಂದ ಮಿಲ್ಲಿ ಮಲಗಿಕೊಳ್ಳಲು ತೆರಳಿದ್ಲು. ಕೋಣೆಗೆ ಹೋದವಳೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅವಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಇದು ಕಳೆದ ವರ್ಷ ನಡೆದ ಘಟನೆಯಾಗಿದ್ದು, ಬಾಹ್ಯ ಸೌಂದರ್ಯಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟ ಬಾಲಕಿಯ ಕೃತ್ಯದಿಂದಾಗಿ ಇಡೀ ಕುಟುಂಬ ಕಣ್ಣೀರಿಡುವಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...