alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬಂಟಿಯಾಗಿ ಮಧುಚಂದ್ರಕ್ಕೊದವಳ ಕಥೆ- ವ್ಯಥೆ..!

huma-honemoon_018ಅವರಿಬ್ಬರು ಎರಡು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದು, ಕೆಲ ತಿಂಗಳ ಹಿಂದಷ್ಟೇ ವಿವಾಹ ಬಂಧನಕ್ಕೊಳಗಾಗಿದ್ದರು. ಬಳಿಕ ಹನಿಮೂನ್ ಗೆ ಗ್ರೀಸ್ ಗೆ ತೆರಳಲು ಬಯಸಿದ ದಂಪತಿಗಳು, ಅದಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಕೊನೆ ಕ್ಷಣದಲ್ಲಾದ ಯಡವಟ್ಟಿನಿಂದಾಗಿ ಪತ್ನಿಯೊಬ್ಬಳೇ ಹನಿಮೂನ್ ಗೆ ಹೋಗುವಂತಾಗಿದೆ. ಏಕೆ ಅಂತೀರಾ? ಮುಂದೆ ಓದಿ.

ಪಾಕಿಸ್ತಾನ ಮೂಲದ ಹುಮಾ ಮೊಬಿನ್ ಹಾಗೂ ಅರ್ಸಲನ್ ಸೆವರ್ ಬಟ್, ವಿವಾಹವಾದ ಬಳಿಕ ಹನಿಮೂನ್ ಗೆ ಗ್ರೀಸ್ ಗೆ ತೆರಳಲು ಮುಂದಾಗಿದ್ದು, ಅದಕ್ಕಾಗಿ ಪೂರಕ ಸಿದ್ದತೆಗಳನ್ನು ಕೈಗೊಂಡಿದ್ದರು. ಹೊರಡುವ ಕ್ಷಣ ಹತ್ತಿರವಾದಾಗ ತಾಂತ್ರಿಕ ಕಾರಣಕ್ಕಾಗಿ ಹುಮಾ ಮೊಬಿನ್ ಪತಿಗೆ ನಿಗದಿತ ಸಮಯಕ್ಕೆ ವೀಸಾ ದೊರೆಯಲಿಲ್ಲ.

ದಂಪತಿಗಳು ಹನಿಮೂನ್ ರದ್ದು ಮಾಡಲು ನಿಶ್ಚಯಿಸಿದ್ದರಾದರೂ ಅದಾಗಲೇ ಪ್ರವಾಸದ ಸಂಪೂರ್ಣ ಹಣವನ್ನು ಪಾವತಿಸಲಾಗಿತ್ತು. ಹೀಗಾಗಿ ಹುಮಾ ಒಬ್ಬಳೇ ಹನಿಮೂನ್ ಗೆ ತೆರಳಿದ್ದಾಳೆ. ಅಲ್ಲಿನ ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಿದ ವೇಳೆ ಪಕ್ಕದಲ್ಲಿ ಪತಿ ಇದ್ದಂತೆ ಕಲ್ಪಿಸಿಕೊಂಡು ತನ್ನ ಕೈ ಆತನ ಹೆಗಲ ಮೇಲಿಟ್ಟಂತೆ ಹಲವು ಫೋಟೋಗಳನ್ನು ತೆಗೆಸಿಕೊಂಡ ಬಳಿಕ ಅವುಗಳನ್ನು ಫೇಸ್ ಬುಕ್ ಗೆ ಹಾಕಿದ್ದಾಳೆ. ಈ ಫೋಟೋಗಳೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...