alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ಜಾಮ್ ನಿಂದ ಬೇಸತ್ತ ಮಹಿಳೆ ಮಾಡಿದ್ದೇನು?

yoga

ಟ್ರಾಫಿಕ್ ನಲ್ಲಿ ಸಿಕ್ಹಾಕ್ಕೊಳ್ಳೋದು ಅಂದ್ರೆ ಸಿಕ್ಕಾಪಟ್ಟೆ ಕಿರಿಕಿರಿ. ಟ್ರಾಫಿಕ್ ನಮ್ಮ ಇಡೀ ದಿನದ ಮೂಡನ್ನೇ ಹಾಳುಮಾಡಿಬಿಡುತ್ತೆ. ಅಮೆರಿಕದಲ್ಲೂ ಸಂಚಾರ ದಟ್ಟಣೆಯಿಂದ ಬೇಸತ್ತ ಮಹಿಳೆಯೊಬ್ಳು ವಿಭಿನ್ನ ಕೆಲಸದ ಮೂಲಕ ಗಮನ ಸೆಳೆದಿದ್ದಾಳೆ. ಕ್ರಿಸ್ಟಿನ್ ಜಾರ್ನ್ಸೆನ್ ಎಂಬಾಕೆ ಮಿಯಾಮಿ ಹೈವೇಯಲ್ಲಿ ತೆರಳ್ತಾ ಇದ್ಲು. ಅಲ್ಲಿ ಫುಲ್ ಟ್ರಾಫಿಕ್ ಜಾಮ್.

ಎಷ್ಟೊತ್ತಾದ್ರೂ ವಾಹನಗಳು ಮೂವ್ ಆಗೋ ಸೂಚನೆಯೇ ಸಿಗಲಿಲ್ಲ. ಕಾರಲ್ಲಿ ಕೂತು ಕೂತು ಬೇಸತ್ತ ಕ್ರಿಸ್ಟಿನ್ ತನ್ನ ಯೋಗಾ ಮ್ಯಾಟ್ ತೆಗೆದುಕೊಂಡು ಕೆಳಕ್ಕೆ ಇಳಿದಿದ್ದಾಳೆ. ನಡು ರಸ್ತೆಯಲ್ಲೇ ಮ್ಯಾಟ್ ಹಾಸಿಕೊಂಡು ಯೋಗಾಸನ ಮಾಡಲು ಆರಂಭಿಸಿದ್ದಾಳೆ. ಟ್ರಾಫಿಕ್ ಕ್ಲಿಯರ್ ಆಗೋವರೆಗೆ ಕ್ರಿಸ್ಟಿನ್ ಹತ್ತಾರು ಬಗೆಯ ಯೋಗಾಸನಗಳನ್ನು ಮಾಡಿದ್ಲು.

ಕ್ರಿಸ್ಟಿನ್ ಕಾರಲ್ಲಿ ಪೆಟ್ರೋಲ್ ಕೂಡ ಕಡಿಮೆಯಿತ್ತು. ಎಂಜಿನ್ ಆಫ್ ಮಾಡದೆ ಆಕೆಗೆ ಬೇರೆ ವಿಧಿಯೇ ಇರಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ಟ್ರಾಫಿಕ್ ಜಾಮ್ ಆಗಿದ್ರಿಂದ ಆ ಸಮಯವನ್ನು ವ್ಯರ್ಥ ಮಾಡದೆ ಕ್ರಿಸ್ಟಿನ್ ಸದ್ಭಳಕೆ ಮಾಡಿಕೊಂಡಿದ್ದಾಳೆ. ನಡುರಸ್ತೆಯಲ್ಲಿ ಆಕೆ ಯೋಗಾಸನ ಮಾಡ್ತಾ ಇರೋ ಫೋಟೋ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...