alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಚಾಲಕ

ಅಮೆರಿಕಾದ ಮಿಚಿಗನ್ ನಲ್ಲಿ ಟೌ ಟ್ರಕ್ ಚಾಲಕನೊಬ್ಬ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ರಸ್ತೆ ಬದಿಯಲ್ಲಿ ನಿಂತಿದ್ದ ಕಾರನ್ನು ಎತ್ತಿಕೊಂಡು ಹೋಗಲು ಟೌ ಟ್ರಕ್ ಚಾಲಕ ಸಜ್ಜಾಗಿದ್ದ. ಆತನ ಹಿಂದೆಯೇ ಪೊಲೀಸರ ವಾಹನವಿದ್ದು, ಅದರಲ್ಲಿ ಈ ಘಟನಾವಳಿಗಳ ಚಿತ್ರಣ ಮಾಡಲಾಗುತ್ತಿತ್ತು. ಟ್ರಕ್ ಚಲಾಯಿಸಿಕೊಂಡು ಹೋಗಲು ಚಾಲಕ ಅದರ ಬಳಿಗೆ ಹೋಗಿದ್ದು, ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಕಾರು ಟ್ರಕ್ ಗೆ ಕಟ್ಟಲಾಗಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಅಷ್ಟೇ ಅಲ್ಲ, ಡಿಕ್ಕಿಯ ರಭಸಕ್ಕೆ ಅಪಘಾತವೆಸಗಿದ ಕಾರು ಟ್ರಕ್ ನ ಮೇಲೇರಿ ಕುಳಿತಿದೆ. ಅದೃಷ್ಟವಶಾತ್ ಚಾಲಕ ಕೊಂಚದರಲ್ಲೇ ಅಪಾಯದಿಂದ ಪಾರಾಗಿದ್ದಾನೆ. ಅಪಘಾತವೆಸಗಿದ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಪೊಲೀಸ್ ವಾಹನದಲ್ಲಿದ್ದ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...