alex Certify
ಕನ್ನಡ ದುನಿಯಾ       Mobile App
       

Kannada Duniya

ವಯಾಗ್ರ ಓವರ್ ಡೋಸ್, ಬೆತ್ತಲಾಗಿ ವಿಲಕ್ಷಣ ವರ್ತನೆ

ಫುಕೆಟ್: ವಯಾಗ್ರ ಓವರ್ ಡೋಸ್ ಆಗಿ ಪ್ರವಾಸಿಗನೊಬ್ಬ ಬೆತ್ತಲಾಗಿ ರಂಪಾಟ ನಡೆಸಿದ ವಿಲಕ್ಷಣ ಘಟನೆ, ಥೈಲ್ಯಾಂಡ್ ನ ಫುಕೆಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನ್ಯೂಯಾರ್ಕ್ ಸ್ಟೀವ್ ಚೊ(27) ಫುಕೆಟ್ ವಿಮಾನ ನಿಲ್ದಾಣದಲ್ಲಿ ಬೆತ್ತಲಾಗಿ ಓಡಾಟ ನಡೆಸಿದ್ದಾನೆ. ಆತ ಅತಿಯಾಗಿ ವಯಾಗ್ರ ಸೇವಿಸಿದ್ದು, ಸಂಪೂರ್ಣ ಬೆತ್ತಲಾಗಿ ಪ್ರಯಾಣಿಕರ ಎದುರಲ್ಲೇ ಓಡಾಡಿ ಆತಂಕ ಸೃಷ್ಠಿಸಿದ್ದಾನೆ.

ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಿಡಿಯುವ ಪ್ರಯತ್ನ ನಡೆಸಿದರೂ, ಆತನ ರಂಪಾಟ ಮುಂದುವರೆದಿದೆ. ಇದರಿಂದಾಗಿ ನಿಲ್ದಾಣದಲ್ಲಿದ್ದವರು ಮುಜುಗರ ಅನುಭವಿಸುವಂತಾಗಿದೆ.

ಕೊನೆಗೆ ಸತತ ಪ್ರಯತ್ನದ ಬಳಿಕ ಆತನನ್ನು ಹಿಡಿದು ಶಾಂತಗೊಳಿಸಲಾಗಿದೆ. ಆತ ಅತಿಯಾಗಿ ವಯಾಗ್ರ ಸೇವಿಸಿದ್ದು, ರಂಪಾಟಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಆತ ವಿಮಾನ ನಿಲ್ದಾಣದಲ್ಲಿ ಬೆತ್ತಲಾಗಿ ಓಡಾಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...