alex Certify
ಕನ್ನಡ ದುನಿಯಾ       Mobile App
       

Kannada Duniya

ಶತ್ರುರಾಷ್ಟ್ರದ ಮಗುವಿಗೆ ಹಾಲುಣಿಸಿದ್ದಾಳೆ ಇಸ್ರೇಲ್ ನ ನರ್ಸ್

feed

ಇಸ್ರೇಲ್ ಮತ್ತು ಪ್ಯಾಲಸ್ಟೇನ್ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಆದ್ರೆ ಈ ಶತ್ರುತ್ವವನ್ನು ಲೆಕ್ಕಿಸದೇ ಇಸ್ರೇಲ್ ನ ನರ್ಸ್ ಒಬ್ಬಳು ಪ್ಯಾಲಸ್ಟೇನ್ ನ ಮಗುವಿಗೆ ಹಾಲುಣಿಸಿದ್ದಾಳೆ. ಈ ಫೋಟೋ ವೈರಲ್ ಆಗಿದೆ. ಈ ಮಗುವಿನ ಹೆತ್ತವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಯಮನ್ ಅಬು ರಮೀಲಾ ಎಂಬ ಈ ಮುದ್ದು ಮಗುವಿಗೆ 9 ತಿಂಗಳು. ಕಾರು ಅಪಘಾತದಲ್ಲಿ ತಂದೆ ಮೃತಪಟ್ಟಿದ್ದಾನೆ, ಮಗುವಿನ ತಾಯಿ ಕೂಡ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಪುಟ್ಟ ಮಗುವಿಗೆ ಬಾಟಲಿಯಲ್ಲಿ ಹಾಲು ಕುಡಿಸಲು ಇಸ್ರೇಲ್ ನ ನರ್ಸ್ ಯತ್ನಿಸಿದ್ದಾಳೆ.

ಆದ್ರೆ ಮಗು ಬಾಟಲಿಯಲ್ಲಿ ಹಾಲು ಕುಡಿಯಲು ನಿರಾಕರಿಸಿದೆ. ಕೊನೆಗೆ ಊಲಾ ಎಂಬ ಆ ನರ್ಸ್ ತಾನೇ ಪ್ಯಾಲಸ್ತೇನ್ ನ ಕಂದಮ್ಮನಿಗೆ ಸ್ತನಪಾನ ಮಾಡಿಸಿದ್ದಾಳೆ. ನರ್ಸ್ ಗೆ ಕೂಡ ಮೂವರು ಮಕ್ಕಳಿದ್ದಾರೆ. ಹಾಲು ಕುಡಿದ ಮಗು ನರ್ಸ್ ಮಡಿಲಲ್ಲೇ ನೆಮ್ಮದಿಯಾಗಿ ನಿದ್ದೆ ಮಾಡಿದೆ.

ತನ್ನ ಕರ್ತವ್ಯದ ಅವಧಿಯಲ್ಲಿ ನರ್ಸ್ ಐದು ಬಾರಿ ಮಗುವಿಗೆ ಹಾಲುಣಿಸಿದ್ದಾಳೆ. ತನ್ನ ಶಿಫ್ಟ್ ಮುಗಿದ ಮೇಲೆ ಮಗುವಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಫೇಸ್ಬುಕ್ ನಲ್ಲಿ ಊಲಾ ಯಾರಾದ್ರೂ ಮಗುವಿನ ಆರೈಕೆ ಮಾಡುವಂತೆ ಮನವಿ ಮಾಡಿದ್ದಾಳೆ. ಇದಕ್ಕೆ ನೂರಾರು ಜನರು ಪ್ರತಿಕ್ರಿಯಿಸಿದ್ದು, ಮಗುವಿಗೆ ಹಾಲುಣಿಸಲು ಮುಂದೆ ಬಂದಿದ್ದಾರೆ.

ಶತ್ರುರಾಷ್ಟ್ರದ ಮಗು ಅನ್ನೋ ಕಾರಣಕ್ಕೆ ನಿರ್ಲಕ್ಷಿಸದೆ ಸ್ವಂತ ಮಗುವಿನಂತೆ ಆರೈಕೆ ಮಾಡಿದ ದಾದಿಗೆ, ಯಮನ್ ಸಂಬಂಧಿಕರು ಧನ್ಯವಾದ ಹೇಳಿದ್ದಾರೆ. ಮಾನವೀಯತೆ ಎಲ್ಲವನ್ನೂ ಮೀರಿದ್ದು ಅನ್ನೋದನ್ನು ನರ್ಸ್ ಜಗತ್ತಿಗೆ ಸಾರಿ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...