alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಗಾಗಿ ಪ್ರೇಮಿಗಳು ಹಾಕಿದ್ದು ಇಂತಹ ಖತರ್ನಾಕ್ ಸ್ಕೆಚ್

ಅಮೆರಿಕದ ಲೂಸಿಯಾನಾದಲ್ಲಿ ಇಬ್ಬರು ಪ್ರೇಮಿಗಳು ಉಬರ್ ಚಾಲಕನನ್ನು ದರೋಡೆ ಮಾಡಿದ್ದಾರೆ. ಇದಕ್ಕೆ ಅವರು ಬಳಸಿದ ಟ್ರಿಕ್ ಮಾತ್ರ ನಿಜಕ್ಕೂ ಆಘಾತಕಾರಿಯಾಗಿದೆ. ರೇನಾ ಫಿಲ್ಲೊಯ್ಸ್ ಎಂಬ ಯುವತಿ ಉಬರ್ ಚಾಲಕನ ಮುಂದೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡ್ಲು.

ಅಷ್ಟೇ ಅಲ್ಲ ಅವನ ಗಮನವನ್ನು ತನ್ನತ್ತ ಸೆಳೆಯಲು ಆತನಿಗೆ ಚುಂಬಿಸಿದ್ದಾಳೆ. ಅದೇ ಸಮಯದಲ್ಲಿ ಅವಳ ಪ್ರಿಯಕರ ಜೇಬಿನಿಂದ ಚಾಕು ತೆಗೆದು ಉಬರ್ ಚಾಲಕನ ಕತ್ತಿನ ಮೇಲಿಟ್ಟಿದ್ದ. ಹಣ ಕೊಡದೇ ಇದ್ರೆ ಕೊಂದು ಬಿಡೋದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ ಚಾಲಕನಿಗೆ ಹೊಡೆದಿದ್ದಾನೆ.

ಆ ರಭಸಕ್ಕೆ ಉಬರ್ ಚಾಲಕನ ಹಲ್ಲೊಂದು ಕಳಚಿ ಬಿದ್ದಿತ್ತು. ಹೆದರಿಂದ ರೇನಾಳ ಪ್ರಿಯಕರ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ರೇನಾ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಾಟಕವಾಡಿದ್ದಾಳೆ. ಪೊಲೀಸ್ ತನಿಖೆಯಲ್ಲಿ ಪ್ರೇಮಿಗಳ ಮಾಸ್ಟರ್ ಪ್ಲಾನ್   ಬಹಿರಂಗವಾಗಿದೆ.

ಖುದ್ದು ರೇನಾ ಉಬರ್ ಚಾಲಕನಿಗೆ ಕರೆ ಮಾಡಿ ಮನೆಗೆ ಬರಹೇಳಿದ್ಲು. ಆತ ಬೆಲ್ ಮಾಡ್ತಿದ್ದಂತೆ ಟಾಪ್ಲೆಸ್ ಆಗಿಯೇ ಬಂದು ಬಾಗಿಲು ತೆರೆದಿದ್ದಾಳೆ. ನಂತರ ಅವನನ್ನು ತಬ್ಬಿಕೊಂಡು ಚುಂಬಿಸಿದ್ದಾಳೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ರೇನಾಳ ಪ್ರಿಯಕರ ಅಲ್ಲಿ ಪ್ರತ್ಯಕ್ಷನಾಗಿದ್ದ. ಚಾಕು ಹಿಡಿದು ಚಾಲಕನಿಗೆ ಬೆದರಿಸಿದ್ದ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...