alex Certify
ಕನ್ನಡ ದುನಿಯಾ       Mobile App
       

Kannada Duniya

ದುರಂತ ಸಾವನ್ನಪ್ಪಿದ್ಲು ಟಾಪ್ಲೆಸ್ ಮಹಿಳೆ

ಕಾರಿನ ಕಿಟಕಿಯಿಂದ ಹೊರಗಿಣುಕಿದ್ದ ಟಾಪ್ಲೆಸ್ ಮಹಿಳೆಯೊಬ್ಳು ದುರಂತ ಸಾವಿಗೀಡಾಗಿದ್ದಾಳೆ. ರಷ್ಯಾದ ಮಹಿಳೆ ನತಾಲಿಯಾ ಬೋರೋಡಿನ್ ಟಾಪ್ಲೆಸ್ ಆಗಿದ್ಲು. ಕಾರಿನ ಕಿಟಕಿಯಿಂದ ಹೊರಕ್ಕೆ ತಲೆ ಹಾಕಿ ತನ್ನನ್ನು ತಾನೇ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ಲು.

ಈ ವೇಳೆ ಪಕ್ಕದಲ್ಲಿ ಬಂದ ಕಾರನ್ನು ನತಾಲಿಯಾ ಗಮನಿಸಿಲ್ಲ. ಕಾರಿನ ಲ್ಯಾಂಪ್ ಪೋಸ್ಟ್ ಅವಳ ತಲೆಗೆ ಬಡಿದಿದೆ. ತೀವ್ರ ಗಾಯಗೊಂಡು ನತಾಲಿಯಾ ಸಾವನ್ನಪ್ಪಿದ್ದಾಳೆ. 35ರ ಹರೆದ ನತಾಲಿಯಾ ರಷ್ಯಾ ಮೂಲದವಳು. ತನ್ನ ಗೆಳತಿ ಜೊತೆಗೆ ಡೊಮಿನಿಕ್ ರಿಪಬ್ಲಿಕ್ ಗೆ ಬಂದಿದ್ಲು.

ಆಕೆಯ ಸ್ನೇಹಿತೆ ಕಾರು ಚಲಾಯಿಸ್ತಾ ಇದ್ಲು. ಕೇವಲ ಬಿಕಿನಿ ಬಾಟಮ್ ಮಾತ್ರ ತೊಟ್ಟಿದ್ದ ನತಾಲಿಯಾ, ತನ್ನ ಅಂಗಾಂಗ ಪ್ರದರ್ಶನ ಮಾಡಲು ಕಾರಿನಿಂದ ಹೊರಕ್ಕೆ ತಲೆ ಹಾಕಿದ್ದಾಳೆ. ಈ ಹುಚ್ಚಾಟ ಅವಳ ಪ್ರಾಣವನ್ನೇ ಬಲಿ ಪಡೆದಿದೆ. ಮೃತ ಮಹಿಳೆಗೆ 8 ವರ್ಷದ ಮಗನಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...