alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಾನತೆಗಾಗಿ ಮೂರು ವರ್ಷಗಳಿಂದ ಟಾಪ್ ಲೆಸ್ ಆಗಿದ್ದಾಳೆ ಈ ಮಹಿಳೆ

woman

ಕಾಲ ಬದಲಾದಂತೆ ಮಾನವನ ಜೀವನ ಶೈಲಿ ಕೂಡ ಬದಲಾಗುತ್ತಿದೆ.  ಆದಿ ಮಾನವರು ಬೆತ್ತಲಾಗಿ ತಿರುಗಾಡ್ತಾ ಇದ್ದರು. ಆದ್ರೆ ಈಗ ಬಗೆ ಬಗೆಯ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಹದ ಕೆಲವು ಅಂಗಗಳನ್ನು ಮುಚ್ಚಿಕೊಳ್ಳಬೇಕೆಂಬ ಕಾನೂನು ಕೆಲ ದೇಶಗಳಲ್ಲಿ ಜಾರಿಯಲ್ಲಿದೆ. ಆದ್ರೆ ಪುರುಷರ ಸಮಾನವಾಗಿ ಸ್ವಾತಂತ್ರ್ಯ ಬೇಕು ಎನ್ನುವ ಮಹಿಳೆಯರು ಟಾಪ್ ಲೆಸ್ ಆಗಿ ರಸ್ತೆಗಿಳಿಯುತ್ತಿದ್ದಾರೆ.

ಸ್ತನ ಮಹಿಳೆಯರ ದೇಹದ ಅಂಗಗಳಲ್ಲಿ ಒಂದು. ಇದಕ್ಕೆ ಲೈಂಗಿಕ ಸಂಬಂಧ ಕೂಡ ಇದೆ. ಹಾಗಾಗಿಯೇ ಕೆಲ ದೇಶಗಳಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಳ್ಳುವ ಮಹಿಳೆಯರನ್ನು ಬಂಧಿಸುತ್ತಾರೆ. ಟಾಪ್ ಲೆಸ್ ಅಭಿಯಾನಕ್ಕೂ ವಿರೋಧವಿದೆ.

ಮಹಿಳೆಯೊಬ್ಬಳು ಇನ್ಸ್ಟ್ರಾಗ್ರಾಮ್ ನಲ್ಲಿ ಮಗುವಿಗೆ ಸ್ತನಪಾನ ಮಾಡಿಸುತ್ತಿದ್ದ ಫೋಟೋವನ್ನು ಅಪ್ ಲೋಡ್ ಮಾಡಿದ್ದಳಂತೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಇನ್ಸ್ಟ್ರಾಗ್ರಾಮ್ ಇದನ್ನು ತೆಗೆದು ಹಾಕಿತ್ತಂತೆ. ಜೊತೆಗೆ ಅಕೌಂಟ್ ವಜಾ ಮಾಡಿತ್ತಂತೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮಹಿಳೆಯರು ಟಾಪ್ ಲೆಸ್ ಅಭಿಯಾನವನ್ನು 2014 ರಿಂದ ಶುರು ಮಾಡಿದ್ದಾರೆ. ಮೇಲುಡುಗೆ ಇಲ್ಲದೆ ಪುರುಷರು ಎಲ್ಲಿ ಬೇಕಾದ್ರೂ ಓಡಾಡಬಹುದು. ಈ ಸ್ವಾತಂತ್ರ್ಯ ಮಹಿಳೆಯರಿಗೆ ಯಾಕಿಲ್ಲ ಎಂದು ಪ್ರಶ್ನಿಸುವ ಅನೇಕ ಮಹಿಳೆಯರು ಈ ಅಭಿಯಾನವನ್ನು ನಡೆಸುತ್ತಿದ್ದಾರೆ.

27 ವರ್ಷದ ಚೆಲ್ಸಿಯಾ ಎಂಬಾಕೆ ಸತತ ಮೂರು ವರ್ಷಗಳಿಂದ ಮೇಲುಡುಗೆ ಇಲ್ಲದೆ ಸಂಚಾರ ಮಾಡ್ತಾ ಇದ್ದಾಳೆ. ವಾಷಿಂಗ್ಟನ್, ನ್ಯೂಯಾರ್ಕ್ನಲ್ಲಿ ಮಹಿಳೆಯರಿಗೆ ಯಾವುದೇ ನಿರ್ಬಂಧವಿಲ್ಲ. ಹಾಗಾಗಿ ಟಾಪ್ ಲೆಸ್ ಆಗಿ ತಿರುಗಾಡುವ ಈ ಮಹಿಳೆ, ತನ್ನ ಅನುಭವವನ್ನು ಬ್ಲಾಗ್ ನಲ್ಲಿ ಬರೆದುಕೊಳ್ಳುತ್ತಾಳೆ. ಮಹಿಳಾ ಸಮಾನತೆಗಾಗಿ ಈಕೆ ಮಾಡುತ್ತಿರುವ ಹೋರಾಟ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...