alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ನಲ್ಲಿ ಜನ ಸರ್ಚ್ ಮಾಡ್ತಾರೆ ಇಂತ ಪ್ರಶ್ನೆ..!

google-search_

ಯಾವುದೇ ಮಾಹಿತಿ ಇರಲಿ, ಇಲ್ಲ ಯಾವುದೇ ಪ್ರಶ್ನೆಗೆ ಉತ್ತರ ಬೇಕಿರಲಿ ತಕ್ಷಣ ಗೂಗಲ್ ಮೇಲೆ ಕೈ ಹೋಗುತ್ತೆ. ಗೂಗಲ್ ಸರ್ಚ್ ಇಂಜಿನ್ ಮೂಲಕ ತಮಗೆ ಬೇಕಾದ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತೇವೆ. ಕುತೂಹಲಕಾರಿ ಮಾಹಿತಿಗಳನ್ನು ಪಡೆಯುತ್ತೇವೆ. ಆದ್ರೆ ಗೂಗಲ್ ಗೆ ಯಾವ ಪ್ರಶ್ನೆಯನ್ನು ಹೆಚ್ಚಾಗಿ ಜನ ಕೇಳ್ತಾರೆ ಎಂಬ ಕುತೂಹಲ ನಿಮಗೂ ಇದ್ದೇ ಇದೆ.

ಗೂಗಲ್ ಗೆ ಯಾವ ಪ್ರಶ್ನೆಯನ್ನು ಹೆಚ್ಚಾಗಿ ಕೇಳಲಾಗಿದೆ ಎಂಬ ವಿವರ ಇಲ್ಲಿದೆ. ನಿಮಗೆ ಆಶ್ಚರ್ಯವಾಗಬಹದು. ನಾನು ಗರ್ಭಿಣಿಯಾ? ಎಂಬ ಪ್ರಶ್ನೆಯನ್ನು ಗೂಗಲ್ ಗೆ ಅತಿ ಹೆಚ್ಚು ಬಾರಿ ಕೇಳಲಾಗಿದೆ. ತಿಂಗಳಲ್ಲಿ 90,600 ಬಾರಿ ಈ ಪ್ರಶ್ನೆಗೆ ಉತ್ತರ ಹುಡುಕಲಾಗಿದೆ.

ಇಷ್ಟೇ ಅಲ್ಲ ನಾನು ಯಾವಾಗ ಸಾಯ್ತೇನೆ ಎಂಬ ಪ್ರಶ್ನೆಯನ್ನು ಕೂಡ ಜನರು ಗೂಗಲ್ ಮುಂದಿಟ್ಟಿದ್ದಾರೆ. ಟಾಪ್ ಟೆನ್ ನಲ್ಲಿರುವ ಪ್ರಶ್ನೆಗಳು ಇಲ್ಲಿವೆ.

  1. ನಾನು ಗರ್ಭಿಣಿಯಾ? ತಿಂಗಳಿಗೆ 90,600 ಬಾರಿ ಸರ್ಚ್
  2. ನನಗೆ ಮನೆ ಹೇಗೆ ಸಿಗುತ್ತೆ? ತಿಂಗಳಿಗೆ 49,500 ಬಾರಿ ಸರ್ಚ್
  3. ಏಲಿಯೆನ್ಸ್ ನಿಜವಾಗ್ಲೂ ಇದೆಯಾ? ತಿಂಗಳಿಗೆ 49,500 ಬಾರಿ ಸರ್ಚ್
  4. ಯಾವುದರಿಂದ ಕ್ಯಾಲೋರಿ ಬರ್ನ್ ಆಗುತ್ತೆ? ತಿಂಗಳಿಗೆ 49,500 ಬಾರಿ ಸರ್ಚ್
  5. ನಾನು ಯಾವಾಗ ಸಾಯ್ತೇನೆ? ತಿಂಗಳಿಗೆ 49500 ಬಾರಿ ಸರ್ಚ್ ಆಗಿದೆ
  6. ನಾನು ಪ್ರೀತಿಯಲ್ಲಿ ಬಿದ್ದಿದ್ದೇನಾ?
  7. ಪೆಂಗ್ವಿನ್ ಗಳಿಗೆ ಮಂಡಿ ಇರುತ್ತಾ?
  8. ನಾವು ಇಲ್ಲಿ ಯಾಕಿದ್ದೇವೆ?
  9. ಟೂತ್ ಫೇರಿ ರಿಯಲ್ಲಾ?
  10. ಹಂದಿಗಳಿಗೆ ಬೆವರು ಬರುತ್ತಾ?

ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಜನ ಗೂಗಲ್ ಗೆ ಕೇಳ್ತಾರೆ. ಅದರಿಂದ ಉತ್ತರ ಪಡೆದು ತಮ್ಮ ಕುತೂಹಲ ತಣಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...