alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ತುಂಬಾ ಚೆಲ್ಲಾಡಿದೆ ಟನ್ ಗಟ್ಟಲೆ ಲಿಕ್ವಿಡ್ ಚಾಕೋಲೆಟ್

ಲಿಕ್ವಿಡ್ ಚಾಕೋಲೆಟ್ ಸಾಗಿಸುತ್ತಿದ್ದ ಟ್ರಕ್ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ರಸ್ತೆ ತುಂಬೆಲ್ಲಾ ಲಿಕ್ವಿಡ್ ಚಾಕೋಲೆಟ್ ಹರಿದಿರುವ ಘಟನೆ ಪೋಲೆಂಡ್ ನಲ್ಲಿ ನಡೆದಿದೆ.

ದಕ್ಷಿಣ ಪೋಲೆಂಡ್ ನ ಜೆಸ್ನಿಯಾ ಹಾಗೂ ಸ್ಲುಪ್ಕಾ ನಗರಗಳ ನಡುವಿನ ಹೆದ್ದಾರಿ ಎ2 ನಲ್ಲಿ ಈ ಘಟನೆ ನಡೆದಿದ್ದು, ನಿಯಂತ್ರಣ ತಪ್ಪಿದ ಈ ಟ್ರಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಉರುಳಿ ಬಿದ್ದಿದೆ.

ಇದರಿಂದಾಗಿ ಟ್ರಕ್ ನಲ್ಲಿದ್ದ ಲಿಕ್ವಿಡ್ ಚಾಕೋಲೆಟ್ ರಸ್ತೆ ತುಂಬೆಲ್ಲಾ ಹರಿದಾಡಿದೆ. ಇದರ ಮೇಲೆ ಓಡಾಡಿದ ಇತರೆ ವಾಹನಗಳು ಹೆದ್ದಾರಿಯಲ್ಲಿ ಸಂಚರಿಸಿರುವ ಕಾರಣ ಹಲವು ಕಿಲೋಮೀಟರ್ ಗಳವರೆಗೆ ಚಾಕೋಲೆಟ್ ಗುರುತು ಮೂಡಿದೆ.

ಹೊರಗಿನ ವಾತಾವರಣಕ್ಕೆ ಲಿಕ್ವಿಡ್ ಚಾಕೋಲೆಟ್ ಗಟ್ಟಿಯಾಗತೊಡಗಿದ್ದು, ಇದು ಅಧಿಕಾರಿಗಳ ತಲೆ ಬಿಸಿಗೆ ಕಾರಣವಾಗಿದೆ. ಈಗ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಸ್ವಚ್ಚಗೊಳಿಸುವ ಕಾರ್ಯ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...