alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಕಾಲದಲ್ಲಿ ಟೋಮೋಟೋ ಹೋಳಿ…!

tomato-3

ಭಾರತದ ಮಾರುಕಟ್ಟೆಯಲ್ಲಿ ಟೋಮೋಟೋ ಪೂರೈಕೆ ಕಡಿಮೆಯಾಗಿದೆ. ಇದ್ರಿಂದಾಗಿ ಬೆಲೆ ಗಗನಕ್ಕೇರಿದೆ. ಟೋಮೋಟೋ ರಕ್ಷಣೆಗಾಗಿ ಕೆಲವು ಕಡೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಆದ್ರೆ ದಕ್ಷಿಣ ಕೊರಿಯಾದ Hwacheon ಜನರು ಟೋಮೋಟೋ ಹಬ್ಬ ಆಚರಿಸಿದ್ದಾರೆ.

ಈ ಹಬ್ಬವನ್ನು ಪ್ರತಿವರ್ಷ ದಕ್ಷಿಣ ಕೊರಿಯಾದಲ್ಲಿ ಆಚರಿಸಲಾಗುತ್ತದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಹಬ್ಬದಲ್ಲಿ ಪಾಲ್ಗೊಳ್ತಾರೆ. ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಈ ಹಬ್ಬಕ್ಕಾಗಿ ಸುಮಾರು 83 ಟನ್ ಟೋಮೋಟೋ ಬಳಸಲಾಗುತ್ತದೆಯಂತೆ.

ಈ ಉತ್ಸವದ ಜೊತೆಗೆ ಬೇರೆ ಆಟಗಳು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದ್ರಿಂದ ಸ್ಥಳೀಯ ಜನರಿಗೆ ಆರ್ಥಿಕ ನೆರವು ಸಿಗುತ್ತದೆ. ತಿನ್ನಲು ಯೋಗ್ಯವಲ್ಲದ ಟೋಮೋಟೋವನ್ನು ಈ ಹಬ್ಬದಲ್ಲಿ ಬಳಸಲಾಗುತ್ತದೆಯಂತೆ. ಈ ಟೋಮೋಟೋದಲ್ಲಿ ಜನರು ಮಿಂದೇಳುತ್ತಾರೆ. ಒಬ್ಬರಿಗೊಬ್ಬರು ಟೋಮೋಟೋದಲ್ಲಿ ಹೊಡೆದುಕೊಂಡು ಸಂಭ್ರಮಿಸ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...